18 ವರ್ಷಗಳ ನಂತರ ಉದ್ಘಾಟನಾ ಭಾಗ್ಯ ಕಾಣುತ್ತಿರುವ ಪಟ್ಟಣದ ಅಂಬೇಡ್ಕರ್ ಭವನ .
ಸಕಲೇಶಪುರ : ತಾಲ್ಲೂಕಿನ ಜನರ ಬಹುನಿರೀಕ್ಷಿತ ಪಟ್ಟಣದಲ್ಲಿರುವ ಅಂಬೇಡ್ಕರ್ ಭವನ ಇದೆ ನವೆಂಬರ್ 17 ರಂದು ಉದ್ಘಾಟನೆಗೊಳ್ಳುತ್ತಿದೆ .
2004 ರಲ್ಲಿ ಪ್ರಾರಂಭಗೊಂಡ ಭವನದ ಕಟ್ಟಡದ ಕಾಮಗಾರಿ 18 ವರ್ಷ ಕಳೆದರೂ ಪೂರ್ಣಗೊಂಡಿರಲಿಲ್ಲ .ಈ ವಿಚಾರವಾಗಿ ದಲಿತಪರ ಸಂಘಟನೆಗಳು ಹಲವಾರು ಬಾರಿ ಪ್ರತಿಭಟನೆ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ ಆದರೆ ಇದೇ ನವೆಂಬರ್ 17 ರಂದು ಅಂಬೇಡ್ಕರ್ ಭವನ ಉದ್ಘಾಟನೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಅಮೃತಹಸ್ತದಿಂದ ಉದ್ಘಾಟನೆಗೊಳ್ಳುತ್ತಿದೆ .ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಶಾಸಕ ಎಚ್ ಕೆ ಕುಮಾರಸ್ವಾಮಿ ಸೇರಿದಂತೆ ಇನ್ನಿತರ ಗಣ್ಯರು ಆಗಮಿಸಲಿದ್ದಾರೆ .