ಸಕಲೇಶಪುರ/ಬೆಳಗೋಡು :ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ತಾಲೂಕಿನ ಬೆಳಗೋಡು ಹೋಬಳಿ ಹೊಸಪೇಟೆಯ ತರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ
ಮಕ್ಕಳ ದಿನಾಚರಣೆ ಮತ್ತು 133 ನೇ ಜವಾಹರ್ ನೆಹರು ಹುಟ್ಟುಹಬ್ಬದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಶೂಟ್ ಮತ್ತು ಟೈ ಬೆಲ್ಟ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ವೇಳೆ ಮಕ್ಕಳೊಂದಿಗೆ ಗಾಳಿಪಟ ಪಟವನ್ನು ಆರಿಸಲಾಯಿತು.ಕೇಕ್ ಕಟ್ ಮಾಡಿ ಸಿಹಿ ಕೊಡುವುದರ ಮುಖಾಂತರ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿಗಳು ಹಾಗೂ ಸಮಾಜಸೇವಕರಾದಂತ ದೊಡ್ಡದಿಣ್ಣೆ ಜೈಪ್ರಕಾಶ್, ಎಸ್ ಟಿ ಎಂ ಸಿ ಅಧ್ಯಕ್ಷರು ಶಾಲೆಯ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು
ಬೆಳಗೋಡು ಕರ್ನಾಟಕ ರಕ್ಷಣಾ ವೇದಿಕೆಯ ಬಸವರಾಜ್ ಗೌರವ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಬಣ ಮತ್ತು ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಜೊತೆಯಲ್ಲಿ ಮಕ್ಕಳೊಂದಿಗೆ ಗಾಳಿಪಟ ಪಟವನ್ನು ಆರಿಸಲಾಯಿತು