ಮಾಜಿ ಸೈನಿಕರ ಬೇಡಿಕೆ ನ್ಯಾಯಯುತವಾಗಿದೆ ಶಾಸಕ ಎಚ್ ಕೆ ಕುಮಾರಸ್ವಾಮಿ .
ಸಕಲೇಶಪುರ ಭೂಮಿ ಮಂಜೂರಿಗಾಗಿ ಸೋಮವಾರ ಮುಂಜಾನೆಯಿಂದ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ಮಾಜಿ ಸೈನಿಕರ ಅಹವಾಲನ್ನು ಆಲಿಸಿದ ಶಾಸಕ ಎಚ್ಕೆ ಕುಮಾರಸ್ವಾಮಿ ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ ಎಂದು ತಿಳಿಸಿದರು.
ಡೀಮ್ಡ್ ಪಾರೆಸ್ಟ್ ಅರಣ್ಯ ಸೇರಿದಂತೆ ಇನ್ನಿತರ ಅಡೆತಡೆಗಳು ಸರ್ಕಾರದ ನೀತಿ ನಿಯಮಗಳಿಂದ ಸಮಸ್ಯೆ ಉಲ್ಬಣಿಸಿದೆ.ಇದರಲ್ಲಿ ಅಧಿಕಾರಿಗಳ ತಪ್ಪು ಕಾಣುತ್ತಿಲ್ಲ ಎಂದರು .
ನಿಮ್ಮ ಬೇಡಿಕೆಗಳಿಗೆ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನ ತರುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಮಾಜಿ ಸೈನಿಕರಿಗೆ ಅಭಯ ನೀಡಿದರು .