Tuesday, March 25, 2025
Homeಸುದ್ದಿಗಳುಕಳಚಿದ ಜಗತ್ತಿನ ಅಖಂಡವಾದ ಅದ್ಭುತ ಜ್ಞಾನ ಪ್ರವಚನಗಳ ನಿತ್ಯ ದಾಸೋಹದ ಕೊಂಡಿ.*  ಪರಮ ಪೂಜ್ಯ...

ಕಳಚಿದ ಜಗತ್ತಿನ ಅಖಂಡವಾದ ಅದ್ಭುತ ಜ್ಞಾನ ಪ್ರವಚನಗಳ ನಿತ್ಯ ದಾಸೋಹದ ಕೊಂಡಿ.*  ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು, ಈ ಯುಗದ ವ್ಯಕ್ತಿ, ಅತಿದೊಡ್ಡ ಶಕ್ತಿ.

*ಕಳಚಿದ ಜಗತ್ತಿನ ಅಖಂಡವಾದ ಅದ್ಭುತ ಜ್ಞಾನ ಪ್ರವಚನಗಳ ನಿತ್ಯ ದಾಸೋಹದ ಕೊಂಡಿ.* 

ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು, ಈ ಯುಗದ ವ್ಯಕ್ತಿ, ಅತಿದೊಡ್ಡ ಶಕ್ತಿ.

ಚಾರಿತ್ರ್ಯವನ್ನು, ನೀತಿಯನ್ನು,ಸಮಯವನ್ನು, ಗೌರವಿಸುವ ಆರಾಧಿಸುವ ಸಂತರು, ಮಹಾಂತರು, ಜ್ಞಾನಯೋಗಿಗಳು.ಅನನ್ಯ ಪ್ರೇಮದ ಸಂದೇಶವನ್ನು ಜಗತ್ತಿಗೆಲ್ಲ ಸಾರಿದವರು,ಸಾಹಿತಿಗಳು, ಸಾಹಿತ್ಯಾರಾಧಕರು, ಮಾತೃಹೃದಯಿಗಳು ಹತ್ತಾರು ಪುಸ್ತಕ ಬರೆದು ಸಾವಿರಾರು ಪುಸ್ತಕಗಳಿಗೆ ಪ್ರೇರಣೆಯಾದವರು, ದೇಶ-ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ, ವಚನ, ಉಪನಿಷತ್ತು ಗೀತೆಗಳ ಸಂದೇಶ ಸಾರಿದವರು. ಸೃಷ್ಟಿಯ ಪರಮ ಪೂಜಕರು. ಅಂತೆಯೇ ಸಮಷ್ಟಿಗೆಲ್ಲ ಪೂಜ್ಯರು.ಬಿಜಾಪುರದ ಶ್ರೀ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಮಹಾಶಿವಯೋಗಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಸರ್ವಧರ್ಮ ದರ್ಶನಗಳ ಸಾರವನ್ನೆಲ್ಲ ಹೀರಿ ಬೆಳೆದವರು. ಉಪನಿಷತ್ತುಗಳು, ಭಗವದ್ಗೀತೆ, ಯೋಗಸೂತ್ರ, ವಚನಶಾಸ್ತ್ರ ಮುಂತಾದುವನ್ನು ಕುರಿತುಅವರು ಅಮೋಘ ರೀತಿಯಲ್ಲಿ ಪ್ರವಚನಗಳನ್ನು ನೀಡುತ್ತಿದ್ದಾರೆ. ಗಹನವಾದ ವೇದಾಂತ ತತ್ತ್ವಗಳನ್ನೂಅತ್ಯಂತ ಸರಳವಾಗಿ ಸುಲಭಗ್ರಾಹ್ಯವಾಗುವಂತೆ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ವಿವರಿಸುವುದು ಅವರಿಗೇ ಮೀಸಲಾದ ಒಂದು ವೈಶಿಷ್ಟ್ಯ.

ಸರಳ ಜೀವಿಗಳೂ, ನಿಸರ್ಗಪ್ರೇಮಿಗಳೂ ಆದ ಪೂಜ್ಯರ ಮೃದು ಮಧುರ ಸ್ವಭಾವ, ಸದುವಿನಯದ ನಡೆನುಡಿಗಳುಎಂತಹವರನ್ನೂ ಆಕರ್ಷಿಸುತ್ತವೆ. ಸ್ವಾಮೀಜಿಯವರು ಕನ್ನಡ,ಸಂಸ್ಕೃತ, ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದು ಕನ್ನಡ, ಇಂಗ್ಲಿಷ್‌ನಲ್ಲಿ ಹಲವಾರು ಅಮೂಲ್ಯ ಗ್ರಂಥಗಳನ್ನು ರಚಿಸಿದ್ದಾರೆ.

*ಕರೋನಾ ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜನತೆಗೆ ಕೊಟ್ಟ ಸಂದೇಶ*

ನೀವು ಯಾಕೆ ಚಿಂತೆ ಮಾಡುತ್ತೀರಿ, ಎಲ್ಲವನ್ನೂ ಲಾಕ್ ಮಾಡಿಲ್ಲ, ಸೂರ್ಯೋದಯವನ್ನು ಲಾಕ್ ಮಾಡಿಲ್ಲ, ಪ್ರೀತಿಯನ್ನು ಲಾಕ್ ಮಾಡಿಲ್ಲ, ಕುಟುಂಬ ಸಮಯವನ್ನು ಲಾಕ್ ಮಾಡಿಲ್ಲ, ದಯೆ ಲಾಕ್ ಆಗಿಲ್ಲ, ಸೃಜನಶೀಲತೆಯನ್ನು ಲಾಕ್ ಮಾಡಿಲ್ಲ, ಕಲಿಕೆ ಲಾಕ್ ಆಗಿಲ್ಲ, ಸಂಭಾಷಣೆಯನ್ನು ಲಾಕ್ ಮಾಡಲಾಗಿಲ್ಲ, ಕಲ್ಪನೆಯನ್ನು ಲಾಕ್ ಮಾಡಿಲ್ಲ, ಓದುವಿಕೆ ಲಾಕ್ ಆಗಿಲ್ಲ, ಸಂಭಂದವನ್ನು ಲಾಕ್ ಮಾಡಿಲ್ಲ, ಪ್ರಾರ್ಥನೆ ಲಾಕ್ ಆಗಿಲ್ಲ, ಧ್ಯಾನವನ್ನು ಲಾಕ್ ಮಾಡಿಲ್ಲ, ನಿದ್ರೆ ಲಾಕ್ ಆಗಿಲ್ಲ, ಮನೆಯಿಂದ ಕೆಲಸ ಲಾಕ್ ಆಗಿಲ್ಲ, ಭರವಸೆ ಲಾಕ್ ಆಗಿಲ್ಲ, ನಿಮ್ಮಲ್ಲಿರುವುದನ್ನು ಪಾಲಿಸಿ.

ನೀವು ಯಾವಾಗಲೂ ಮಾಡಲು ಬಯಸಿದ್ದನ್ನು ಮಾಡಲು ಲಾಕ್ ಡೌನ್ ಒಂದು ಅವಕಾಶ. ವೆಂಟಿಲೇಟರ್ ಗಿಂತ ಮಾಸ್ಕ್ ಉತ್ತಮವಾಗಿದೆ. ಐಸಿಯುಗಿಂತ ಮನೆ ಉತ್ತಮವಾಗಿದೆ. ಗುಣಪಡಿಸುವುದಕ್ಕಿಂತ ತಡೆಗಟ್ಟುವಿಕೆ ಉತ್ತಮವಾಗಿದೆ. ಆದ್ದರಿಂದ ಸಂತೋಷವಾಗಿರಿ.

ಜೀವನ ಪೂರ್ತಿ ಜೋಬಿಲ್ಲದ ಅಂಗಿ.. ಕಾಲಿಗೆ ನಮಸ್ಕಾರ ಮಾಡಿಸಿಕೊಳ್ಳದೆ .. ಹಣವನ್ನು ಪಡೆದುಕೊಳ್ಳದೆ.. ಸರ್ವರಿಗೂ ಜ್ಞಾನ ನೀಡಿದ ಜಗತ್ತಿನ ಸರಳ ಸಜ್ಜನ ಸಂತ.. ತತ್ವಜ್ಞಾನಿ.. ಮೇಧಾವಿ ಯಾರಾದ್ರೂ ಇದ್ರೆ ಅದು ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಾತ್ರ.

ನನ್ನ ಅಪರೂಪದ ಅಪರಂಜಿ, ಸ್ವಾರ್ಥವನ್ನೇ ಕಾಣದೆ ಸಾರ್ವಜನಿಕ ಕಾಳಜಿ ಹೊಂದಿದ್ದ ಗೌರವ ಘನತೆಗಳು ಸರಳತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಸಿದ್ದೇಶ್ವರ ಸ್ವಾಮೀಜಿ ಅವರು ನಮ್ಮೆಲ್ಲರ ಹೃದಯ ಸಿಂಹಾಸನದಲ್ಲಿ ಪ್ರೀತಿ ಕರುಣೆ ಮಮತೆ ಜ್ಞಾನದ ರೂಪದಲ್ಲಿ ನೆಲೆ ನಿಂತ ಮಹಾಪುರುಷರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು.

 

ಯಡೇಹಳ್ಳಿ”ಆರ್”ಮಂಜುನಾಥ್.

9901606220

RELATED ARTICLES
- Advertisment -spot_img

Most Popular