ಸಕಲೇಶಪುರ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ನೀಡುವುದನ್ನು ಕಾರ್ಯಕರ್ತರ ಅಭಿಪ್ರಾಯ ಪಡೆಯಲು ಹಾಸನ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಗಳಾದ ಡಿಕೆ ಸುರೇಶ್ ಹಾಗೂ ಧ್ರುವನಾರಾಯಣ್ ತಾಲೂಕಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಹಾನುಬಾಳ್ ಹೋಬಳಿಯ ಖಾಸಗಿ ರೆಸಾರ್ಟ್ ಒಂದರಲ್ಲಿ ಕೆಪಿಸಿಸಿ ವೀಕ್ಷಕರ ಸಭೆ ನಡೆಯಲಿದೆ. ಇದೇ ವೇಳೆ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಶಕ್ತಿ ಪ್ರದರ್ಶನ ನಡೆಯಲಿದ್ದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಮುರಳಿ ಮೋಹನ್, ಡಿಸಿ ಸಣ್ಣಸ್ವಾಮಿ, ಡಿ.ಮಲ್ಲೇಶ್, ಗೊರೂರು ವೆಂಕಟೇಶ್, ಭುವನಾಕ್ಷ, ಪುಷ್ಪ ಅಮರನಾಥ್ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಬೆಂಬಲಿಗರನ್ನು ಸಭೆಗೆ ಕರೆ ತರುವ ನಿರೀಕ್ಷೆ ಇದೆ.ಸಭೆಯಲ್ಲಿ ಹಲವು ಗದ್ದಲಗಳು ಉಂಟಾಗುವ ಸಾಧ್ಯತೆ ಇದ್ದು ಟಿಕೇಟ್ ಯಾರಿಗೆ ಘೋಷಣೆ ಯಾಗಬಹುದೆಂದು ಬರುವ ಸಂಕ್ರಾಂತಿ ವರೆಗೆ ಕಾದು ನೋಡಬೇಕಾಗಿದೆ.