Sunday, March 16, 2025
Homeಸುದ್ದಿಗಳುಶ್ರೀ ಸಿದ್ದೇಶ್ವರ ಸ್ವಾಮಿಗಳ ನಿಧನಕ್ಕೆ ತೆಂಕಲಗೂಡು ಮಠದ ಶ್ರೀಗಳಿಂದ ಸಂತಾಪ.

ಶ್ರೀ ಸಿದ್ದೇಶ್ವರ ಸ್ವಾಮಿಗಳ ನಿಧನಕ್ಕೆ ತೆಂಕಲಗೂಡು ಮಠದ ಶ್ರೀಗಳಿಂದ ಸಂತಾಪ.

 

ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳ ನಿಧನಕ್ಕೆ ತಾಲೂಕಿನ  ಯಸಳೂರು ಹೋಬಳಿಯ ತೆಂಕಲಗೂಡು ಬೃಹನ್ ಮಠದ  ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಸಂತಾಪ ಸೂಜಿಸಿದ್ದಾರೆ

ನೆಡೆದಾಡುವ ದೇವರಾಗಿ ಶತಮಾನ ಕಂಡ ಶ್ರೇಷ್ಠ ಸಂತ ರಾಗಿ ಜ್ಞಾನದ ಶಿಖರವಾಗಿ ಭವ್ಯ ಭಾರತದಲ್ಲಿ ಅಷ್ಟೇ ಏಕೆ ವಿದೇಶಗಳಲ್ಲಿಯೂ ಕೂಡ ಆಧ್ಯಾತ್ಮವಾದ ಜ್ಞಾನ ಪಸರಿಸಿದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ನಿಧನಕ್ಕೆ ತೆಂಕಲಗೂಡು ಬೃಹನ್ಮಠದ ಶ್ರೀ.ಷ.ಬ್ರ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದರು. ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಹಲವಾರು ಪ್ರವಚನಗಳಲ್ಲಿ ಪಾಲ್ಗೊಂಡು ಅವರ ಜ್ಞಾನವನ್ನು ಪಡೆದಿರುವುದಕ್ಕೆ ನಾನೇ ಧನ್ಯ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಅಂತಹ ಪೂಜ್ಯರನ್ನು ಕಳೆದುಕೊಂಡಂತಹ ಕರ್ನಾಟಕದ ದೇಶ ಕೂಡ ಬಡವಾಗಿದೆ ಅಂತಹ ಪರಮ ಪೂಜ್ಯರು ಅತ್ಯಂತ ವಿರಳರು ಅವರ ಅಗಲಿಕೆಯ ದುಃಖವನ್ನ ಭರಿಸುವ ಶಕ್ತಿಯನ್ನು ಪರಮಾತ್ಮ ಎಲ್ಲ ಭಕ್ತರಿಗೂ ಅನುಗ್ರಹಿಸಲಿ ಎಂದು ಬೇಡಿಕೊಳ್ಳುತ್ತಿದ್ದೇವೆ.

RELATED ARTICLES
- Advertisment -spot_img

Most Popular