ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮಿಗಳು ಇನ್ನಿಲ್ಲ
ವಿಜಯಪುರ: ಎರಡನೇ ವಿವೇಕಾನಂದ,ನಡೆದಾಡುವ ದೇವರು ಎಂದೇ ಹೆಸರಾಗಿರುವ ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ಸೋಮವಾರ ರಾತ್ರಿ ಅವರು ಕೊನೆಯುಸಿರೆಳೆದರು. ಮಧ್ಯಾಹ್ನದಿಂದಲೇ ಅವರ ದೇಹಸ್ಥಿತಿ ಬಿಗಡಾಸುತ್ತ ಬಂದಿತ್ತು. ಉಸಿರಾಟ ಮತ್ತು ನಾಡಿಮಿಡಿತ ಏರುಪೇರಾಗಿತ್ತು.
ಸಿದ್ದೇಶ್ವರ ಸ್ವಾಮಿಜಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಜನಿಸಿದರು. ಸಿದ್ಧಗೊಂಡಪ್ಪ ಇವರ ಬಾಲ್ಯದ ಹೆಸರು.
ಅತ್ಯಂತ ಸರಳ ಜೀವನ ಮತ್ತು ವಿದ್ವತ್ತೂರ್ಣ ಪ್ರವಚನದಿಂದಾಗಿ ಕೊಟ್ಯಂತರ ಜನರಿಂದ ನಡೆದಾಡುವ ದೇವರು ಎಂದೇ ಕರೆಸಿಕೊಂಡಿದ್ದರು. ಅತ್ಯಂತ ಸರಳ ರೀತಿಯಲ್ಲಿ ಬದುಕಿನ ಕುರಿತು ಅವರು ಪ್ರವಚನ ನೀಡುತ್ತಿದ್ದರು. ಕಳೆದ ಹಲವು ದಿನಗಳಿಂದ ಅವರು ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶನಿವಾರ ಶ್ರೀಗಳ ಆರೋಗ್ಯ ವಿಚಾರಿಸಲು ಧಾವಿಸಿ ಬಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಸಿದ್ದೇಶ್ವರ ಶ್ರೀಗಳ ಆರೋಗ್ಯವಿಚಾರಿಸುತ್ತಿದ್ದರು.