Monday, March 17, 2025
Homeಸುದ್ದಿಗಳುಹಾಸನ : ಮಹಿಳೆಗೆ ಜಸ್ಟ್ ಮೆಸೇಜ್ ಮಾಡಿದ್ದಕ್ಕೆ ಟೈಲರ್ ಹತ್ಯೆ ಪಾಪಿಗಳು – ಐವರು ಅರೆಸ್ಟ್.

ಹಾಸನ : ಮಹಿಳೆಗೆ ಜಸ್ಟ್ ಮೆಸೇಜ್ ಮಾಡಿದ್ದಕ್ಕೆ ಟೈಲರ್ ಹತ್ಯೆ ಪಾಪಿಗಳು – ಐವರು ಅರೆಸ್ಟ್.

ಮಹಿಳೆಗೆ ಜಸ್ಟ್ ಮೆಸೇಜ್ ಮಾಡಿದ್ದಕ್ಕೆ ಟೈಲರ್ ಹತ್ಯೆ – ಐವರು ಅರೆಸ್ಟ್.

ಹಾಸನ: ಮಹಿಳೆಗೆ ಮೆಸೇಜ್ ಮಾಡಿದ ಕಾರಣಕ್ಕೆ ಟೈಲರ್ (Tailor) ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದ ಪ್ರಕರಣಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್ 13 ರಂದು ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ (Channarayapattana) ತಾಲೂಕಿನ ಜನಿವಾರ ಬಳಿ ಈ ಘಟನೆ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಊಪಿನಹಳ್ಳಿಯ ಟೈಲರ್ ಗಂಗಾಧರ್ ಮೃತದುರ್ದೈವಿ. ತನ್ನ ಪತ್ನಿಗೆ ಮಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಮಹಿಳೆ ಪತಿ ಭರತ್ ಆತನ ನಾಲ್ವರು ಸ್ನೇಹಿತರೊಂದಿಗೆ ಸೇರಿಕೊಂಡು ದೊಣ್ಣೆಯಿಂದ ಹಲ್ಲೆ ನಡೆಸಿ ಗಂಗಾಧರ್ ಕೊಲೆ ಮಾಡಿದ್ದಾರೆ.

ಬಂಧಿತ ಆರೋಪಿಗಳನ್ನು ಭರತ್, ಅಭಿಷೇಕ, ಕುಮಾರ್, ಚಿರಂಜೀವಿ ಮತ್ತು ಅಭಿ ಎಂದು ಗುರುತಿಸಲಾಗಿದ್ದು, ಗಂಗಾಧರ್ ಟೈಲರ್ ಶಾಪ್ ಬಳಿ ಬಂದು ಆತನನ್ನು ಎಳೆದೊಯ್ದು ಜನಿವಾರ ಗ್ರಾಮದ ಬಳಿ ಹಲ್ಲೆ ನಡೆಸಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಗಂಗಾಧರ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದರು.

RELATED ARTICLES
- Advertisment -spot_img

Most Popular