Tuesday, March 25, 2025
Homeಸುದ್ದಿಗಳುಹಾಸನ : ಮತ್ತೊಂದು ಮದುವೆಯಾಗಲು ಮುಂದಾಗಿದ್ದ ವಂಚಕ ಈಗ ಪೊಲೀಸರ ಅತಿಥಿ

ಹಾಸನ : ಮತ್ತೊಂದು ಮದುವೆಯಾಗಲು ಮುಂದಾಗಿದ್ದ ವಂಚಕ ಈಗ ಪೊಲೀಸರ ಅತಿಥಿ

 

 

ಹಾಸನ: ಮೊದಲ ಹೆಂಡತಿ ಇರುವಾಗಲೇ ಯಾರಿಗು ತಿಳಿಯದಾಗೆ ಹಾಸನದ ಕಲ್ಯಾಣ ಮಂಟಪವೊದರಲ್ಲಿ ಮದುವೆ ಆಗಲು ಹೊರಟಿದ್ದ ವಂಚಕನ ಬಗ್ಗೆ ಮೊದಲ ಪತ್ನಿಯಿಂದಲೇ ಮದುವೆ ಮಂಟಪಕ್ಕೆ ಕರೆ ಮಾಡಿ ತಿಳಿಸಿ ನಂತರ ಮದುವೆ ನಿಂತು ಹೋದ ಘಟನೆ ಶುಕ್ರವಾರದಂದು ನಡೆದಿದೆ.

ಬೆಂಗಳೂರಿನ ಮೂಲದ ಖಾಸಗೀ ಕ೦ಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಧುಸೂದನ್ ಎಂಬುವನೇ ಮೊದಲ ಮದುವೆ ಆಗಿ 4 ವರ್ಷಗಳೆ ಕಳೆದಿದೆ. ಒಬ್ಬಳು ಹೆಂಡತಿ ಇದ್ದರೂ ಮರೆಮಾಚಿ ಎರಡನೇ ಮದುವೆಯಾಗಲು ಹೋದವನು. ಹಾಸನದ ಎನ್.ಸಿ.ಇ, ಕಲ್ಯಾಣ ಮಂಟಪದಲ್ಲಿ ಎರಡನೇ ಮದುವೆ ಆಗುತ್ತಿರುವ ಬಗ್ಗೆ ಬೆಂಗಳೂರಿನಿಂದಲೇ ಸೂಕ್ಷ್ಮವಾಗಿ ತಿಳಿದುಕೊಂಡ ಮೊದಲ ಹಂಡತಿ ವಸೂದ ಅವರು ರಾತ್ರಿ ಎಲ್ಲಾ ಛತ್ರದ ಮೊಬೈಲ್ ನಂಬರನ್ನು ಅ೦ತರಜಾಲದ ಮೂಲಕ ಹುಡುಕಾಡಿದ್ದು, ಮದುವೆ ದಿನದಂದು ಮದ್ಯಾಹ್ನ ದೊರಕಿದೆ.

ತಕ್ಷಣ ಕಲ್ಯಾಣ ಮಂಟಪಕ್ಕೆ ಕರೆ ಮಾಡಿ ಅಲ್ಲಿನ ಮುಖ್ಯಸ್ಥರಿಗೆ ಮದುವೆಯ ಸತ್ಯಾಂಶವನ್ನು ತಿಳಿಸಲಾಗಿದೆ. ತಕ್ಷಣದಲ್ಲಿ ಮದುವೆ ಮನೆಯ ಹೆಣ್ಣಿನ ಕಡೆಯವರಿಗೆ ವಿಷಯ ಮುಟ್ಟಿಸಿದ್ರು. ಸಲ್ಪ ತಡವಾಗಿದ್ರು ಸಮಸ್ಯೆ ಉಂಟಾಗುತಿತ್ತು. ತಕ್ಷಣ ಆ ಹುಡುಗನನ್ನು ಎಳೆದೊಯ್ದು ಮದುವೆ ಮನೆಯ ಗಂಡಿನ ರೂಮ್ ನಲ್ಲಿ ಕೂಡಿ ಹಾಕಿ ವಿಚಾರಿಸಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಮಧುಸೂದನ್ ಮೊದಲೆ ಸ್ಕೆಚ್ ಹಾಕಿಕೊಂಡು ತನ್ನ ಸಹೋಧರಿಯರಸಹಕಾರದಲ್ಲಿ ಮೊದಲ ಮದುವೆ ಆಗುತ್ತಿರುವುದಾಗಿ ಬಿಂಭಿಸಿಕೊಂಡು ಮದುವೆಗೆ ಸಿದ್ಧನಾಗಿ ಕಲ್ಯಾಣ ಮಂಟಪದವರೆಗೂ ಬಂದಿದ್ದನು. ಆದ್ರೆ ಅವನ ಕಳ್ಳಾಟ ಹೆಚ್ಚು ಸಮಯ ನಡೆಯಲಿಲ್ಲ. ವಿಚಾರ ತಿಳಿದು ಮದುವೆ ನಿಂತು ಹೋಗಿದೆ. ಇಲ್ಲವಾಗಿದ್ರೆ ಒಂದು ಹುಡುಗಿಯ ಜೀವನವೇ ಹಾಳಾಗುತಿತ್ತು. ಮಧುಸೂದನ್ ಮೊದಲೇ ಪ್ಲಾನ್ ಮಾಡಿರುವಂತೆ ಎರಡನೇ ಮದುವೆ ಆಗುವ ಮೊದಲೆ ಆಕೆಯ ಪಾಸ್ ಪೋರ್ಟ್ ಮಾಡಿಸಿದ್ದನು. ಮದುವೆಯಾದ ಕೂಡಲೆ ನಾಳೆ ಶನಿವಾರವೇ ಮಾಲ್ಡಿವ್ ಹೊರ ದೇಶಕ್ಕೆ ಹೋಗಲು ಟಿಕೆಟ್ ಬುಕ್ ಮಾಡಿ ಹನಿಮೂನ್ ಕನಸು ಕಂಡಿದ್ದನು. ಆದ್ರೆ ಅದು ಈಗ ನಿರಾಸೆ ಆಗಿ ಪೋಲಿಸ್ರ ಅತಿಥಿಯಾಗಿದ್ದಾನೆ. ಬಡಾವಣೆ ಪೊಲೀಸರು ಮಧಸೂದನ್‌ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ.

ಮದುವೆ ಗಂಡು ಮಧುಸೂದನ್ ಮಾಧ್ಯಮದೊಂದಿಗೆ ಮಾತನಾಡಿ, ಬೆಂಗಳೂರಿನ ಹುಡುಗಿ ಜೊತೆ ನನಗೆ ಮೊದಲೆ ಮದುವೆ ಆಗಿದ್ದರೂ ನಾನು ಮತ್ತೊಂದು ಮದುವೆ ಆಗುವಾಗ ಹೇಳಿರಲಿಲ್ಲ. ವರದಕ್ಷಿಣೆಯಾಗಿ ಚಿನ್ನದ ಬ್ರಾಸ್ಟೈಟ್, ಉಂಗುರು ಮಾತ್ರ 9 ನೀಡಿದ್ದು, ಮೊದಲ ಹೆಂಡತಿ ನನ್ನ ಜೊತೆ ಇರುವುದಿಲ್ಲ. ಆದ್ರೆ ಇನ್ನು ಡೈವರ್ಸ್ ಕೊಟ್ಟಿರುವುದಿಲ್ಲ. ಮದುವೆ ಆಗಿ ನಾಳೆಯೇ ಮಾಲೀವ್ ಗೆ ಪ್ರಯಾಣ ಮಾಡಲು ಟಿಕೆಟ್ ಬುಕ್ ಮಾಡಿರುವ ಬಗ್ಗೆ ತಿಳಿಸಿ, ತಪ್ಪಾಯ್ತು ಮತ್ತೆ ಹೀಮಗೆ ಎಂದು ಮಾಡುವುದಿಲ್ಲ ಎಂದು ತಪ್ಪನ್ನು ಒಪ್ಪಿಕೊಂಡು ಹೇಳಿಕೆ ನೀಡಲಾಗಿದೆ.

RELATED ARTICLES
- Advertisment -spot_img

Most Popular