ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಕೆಜಿಎಫ್
ಸಕಲೇಶಪುರ : ಮಲೆನಾಡು ಭಾಗದಲ್ಲಿ ಹತ್ತಾರು ವರ್ಷಗಳಿಂದ ಕಾಡಾನೆ ಸಮಸ್ಯೆಯಿದ್ದು ಇದುವರೆಗೂ ಹಲವಾರು ಹೋರಾಟಗಳು ಪ್ರತಿಭಟನೆ ನಡೆದಿದೆ.
ಅಧಿಕಾರಕ್ಕೆ ಬಂದ ಹಲವು ಸರ್ಕಾರಗಳಿಗೆ ಈ ಭಾಗದ ಜನರು ಮನವಿ ಸಲ್ಲಿಸಿದರು ಯಾವುದೇ ಪರಿಹಾರ ಸಿಗದೇ ಕೋಟ್ಯಾಂತರ ರೂಪಾಯಿಗಳ ಬೆಳೆ ಹಾನಿಯಾಗಿದ್ದು ಹಾಗೂ ಸುಮಾರು 72 ಜನರು ಸಕಲೇಶಪುರ ಆಲೂರು ಭಾಗದಲ್ಲಿ ಮೃತಪಟ್ಟಿದ್ದು ನೂರಾರು ಮಂದಿ ಕಾಡಾನೆ ದಾಳಿಗೆ ಗಾಯಗೊಂಡಿದ್ದಾರೆ. ಆದರೂ ಕೂಡ ಸರ್ಕಾರ ಶಾಶ್ವತ ಪರಿಹಾರ ಒದಗಿಸುವ ವಿಫಲವಾದ ಹಿನ್ನೆಲೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ಕಾರ್ಯದರ್ಶಿ ಕೃಷ್ಣಪ್ಪ ತಿಳಿಸಿದ್ದಾರೆ.
ತಾಲೂಕಿನ ಹಿರಿಯೂರು ಕೂಡಿಗೆಹಳ್ಳಿ ನಡೆಯುತ್ತಿರುವ ಕಾಡಾನೆ ಸಮಸ್ಯೆಯ ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ಮಾಹಿತಿ.