ಸಕಲೇಶಪುರ : ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಜಟಾಪಟಿ
ಕಾಡಾನೆ ಸಮಸ್ಯೆ ಕುರಿತು ಹಿರಿಯೂರು ಕೂಡಿಗೆಯಲ್ಲಿ ಇಂದು ನೆಡೆದ ಪ್ರತಿಭಟನೆ ವೇಳೆ ಘಟನೆ.
ರೈತರ ಕೆಲಸ ಬೆಳೆ ಬೆಳೆಯುವುದು ಅದನ್ನು ಮಾರುಕಟ್ಟೆಗೆ ತಲುಪಿಸುವುದು. ಆದರೆ, ತಾಲೂಕಿನ ರೈತರ ದುರದೃಷ್ಟ, ಸಮಸ್ಯೆ ಪರಿಹಾರಕ್ಕಾಗಿ ರಸ್ತೆಯಲ್ಲಿ ಕುಳಿತಿದ್ದಾರೆ. ಕ್ಷೇತ್ರದ ದುರದೃಷ್ಟ ಎಂದರೆ ಸಮಸ್ಯೆ ಬಗೆಹರಿಸ ಬೇಕಾದ ವ್ಯಕ್ತಿಯೆ ಚಳುವಳಿಯಲ್ಲಿ ಕುಳಿತುಕೊಳ್ಳುತ್ತಾರೆಂದು ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಶಾಸಕರ ಹೆಸರು ಹೇಳದೆ ಚುಚ್ಚಿದರು. ಇದರಿಂದ ಕೆರಳಿದ ಶಾಸಕ ಎಚ್.ಕೆ ಕುಮಾರಸ್ವಾಮಿ, ಇದೇಲ್ಲ ನನಗೂ ತಿಳಿದಿದೆ. ನೀವು ಅದನ್ನಲ್ಲ ಮಾತನಾಡಬೇಡಿ. ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ ಸುಮ್ಮನಿರಿ ಎಂದರು. ಇದರಿಂದ ಮತ್ತಷ್ಟು ಕೆರಳಿದ ಮಾಜಿ ಶಾಸಕರು ನಿಮಗೇನ್ರಿ ಗೊತ್ತು ಶಾಸನ ಸಭೆಯಲ್ಲಿ ಕೆಲಸ ಮಾಡಿ ಎಂದು ನಿಮ್ಮನ್ನು ಕಳುಹಿಸಿದರೆ ಬೀದಿಗೆ ಬಂದು ಜನರೊಂದಿಗೆ ಪ್ರತಿಭಟನೆಯಲ್ಲಿ ಕುಳಿತುಕೊಳ್ಳುತ್ತೀರಾ. ಜಿಲ್ಲೆಯಲ್ಲಿ ಮೂವರು ವಿಧಾನಪರಿಷತ್ ಸದಸ್ಯರು, ಓರ್ವ ಸಂಸದ,ರಾಜ್ಯ ಸಭಾ ಸದಸ್ಯ,ಪ್ರಧಾನಿ ಪಟ್ಟ ಏರಿದ್ದ ಎಚ್.ಡಿ ದೇವೆಗೌಡರಂತ ಮುತ್ಸದ್ಧಿ ಇದ್ದರು ತಾಲೂಕಿನ ಸಮಸ್ಯೆ ಬಗೆಹರಿಯದೆ ಇರಲು ಕ್ಷೇತ್ರದ ಶಾಸಕರದ್ದೆ ವೈಪಲ್ಯ ಕಾರಣ. ಇವರಿಗೆ ಮುಂದಿನ ಚುನಾವಣೆಯಲ್ಲಿ ಉತ್ತರ ನೀಡುವ ಕೆಲಸವಾಗಬೇಕಿದೆ. ಶಾಸಕರ ನಿರ್ಲಕ್ಷದ ಪರಿಣಾಮ ತಾಲೂಕಿನ ಸಂಪನ್ಮೂಲವನ್ನು ಬರಿದು ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ತಾಲೂಕನ್ನು ಆಳುವವರ ಚಿತಾವಣೆಯಿಂದಲೇ ತಾಲೂಕಿನಲ್ಲಿ ಜಾತಿಜಾತಿ ಮದ್ಯೆ ಕಂದಕ ನಿರ್ಮಾಣಗೊಳ್ಳುತ್ತಿದೆ ಎಂದು ಆರೋಪಿಸಿದರು. ಎಚ್.ಎಂ ವಿಶ್ವನಾಥರ ಏರುದ್ವನಿಯ ಭಾಷಣದಿಂದಾಗಿ ಶಾಸಕ ಎಚ್.ಕೆ ಕುಮಾರಸ್ವಾಮಿ ಸರಿಸ್ವಾಮಿ ನಿಮ್ಮದೆ ಸರಿ ಎಂದು ಸುಮ್ಮನಾದರು.
ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ ಮಾಜಿ ಶಾಸಕರು ಜನತೆಗೆ ಸುಳ್ಳು ಹೇಳುವುದು ಬೇಡ ರಾಜ್ಯ ವಿಧಾನಸಭೆಯ ಒಬ್ಬ ಶಾಸಕರಿಗೆ ತಿಂಗಳಿಗೆ ಎರಡುವರೆ ಲಕ್ಷ ಮಾತ್ರ ನೀಡುತ್ತದೆ ಆದರೆ ಮಾಜಿ ಶಾಸಕರು ನಾಲ್ಕುವರೆ ಲಕ್ಷ ರೂಪಾಯಿ ಎಂದು ಯಾವ ಲೆಕ್ಕದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಶಾಸಕರ ಸಂಬಳದ ವಿವರ ಗೂಗಲ್ ನಲ್ಲಿ ಸರ್ಚ್ ಮಾಡಿದರೆ ತಿಳಿಯುತ್ತದೆ ಎಂದು ಟಾಂಗ್ ನೀಡಿದರು.