ಸಕಲೇಶಪುರ: ವೈಕುಂಠ ಏಕಾದಶಿಯ ಪ್ರಯುಕ್ತ ಪಟ್ಟಣದ ಅಶೋಕ ರಸ್ತೆಯಲ್ಲಿರುವ ವಾಸವಿ ದೇವಸ್ಥಾನಕ್ಕೆ ಸೋಮವಾರ ಭಕ್ತರ ದಂಡು ಕಂಡು ಬಂತು.
ಬೆಳಗ್ಗೆ ಹೊತ್ತು ಹರಿಯುವ ಮುನ್ನವೆ ದೇಗುಲಗಳೆದುರು ಭಕ್ತರು ದೇವರ ದರ್ಶನಕ್ಕೆ ಸಾಲು ನಿಂತಿದ್ದರು. ವೇದ ಬ್ರಹ್ಮಶ್ರೀ ನರಹರಿ ಭಟ್ ಹಾಗೂ ಕೃಷ್ಣಾನಂದ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಿತು.
ತಿರುಮಲ ದೇವರಿಗೆ ಹೂಗಳಿಂದ ಶೃಂಗಾರ ಮಾಡಲಾಗಿತ್ತು. ಪಕ್ಕದಲ್ಲಿ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸ ಲಾಯಿತು. ಅನಸಂತರ್ಪಣೆ ನಡೆಯಿತು. ವೈಕುಂಠ ಮಹಾದ್ಬಾರವನ್ಬು ನಿರ್ಮಾಣ ಮಾಡಲಾಗಿತ್ತು. ದೇವಾಲಯದಲ್ಲಿ ದೇವರಿಗೆ ಅಭಿಷೇಕ ನಂತರ ಮಹಾ ಮಂಗಳಾರತಿ ನೆರವೇರಿಸಲಾಯಿತು. ಅಷ್ಟೆ ದೇವರ ಪ್ರದಕ್ಷಿಣೆ ನಡೆಯಿತು. ನೂರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದರು. ಪ್ರಸಾದ ವಿತರಣೆ ಮಾಡಲಾಯಿತು.