ಸಕಲೇಶಪುರ: ಗುರುವಾರ ಪಟ್ಟಣದಲ್ಲಿ ನಡೆಯಲಿರುವ ಅಂಬೇಡ್ಕರ್ ಭವನದ ಉದ್ಘಾಟನೆ ಕಾರ್ಯಕ್ರಮದ ಅಂತಿಮ ಕ್ಷಣದ ಸಿದ್ದತೆಯನ್ನು ತಹಶೀಲ್ದಾರ್ ಜಯಕುಮಾರ್ ಬುಧವಾರ ರಾತ್ರಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರುಗಳು ಹಾಜರಿದ್ದರು. ತಹಶೀಲ್ದಾರ್ ಜಯಕುಮಾರ್ ಈ ವೇಳೆ ಮಾತನಾಡಿ ತಾಲೂಕಿನ ಜನರ ಬಹು ದಿನದ ಕನಸಾದ ಅಂಬೇಡ್ಕರ್ ಭವನ ನಾಳೆ ಉದ್ಘಾಟನೆಗೊಳ್ಳಲಿದ್ದು ಯಾವುದೇ ಲೋಪ ದೋಷ ವಾಗದಂತೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು ಎಂದರು.