Monday, March 17, 2025
Homeಸುದ್ದಿಗಳುಸಕಲೇಶಪುರಕರವೇ ಸ್ವಾಭಿಮಾನ ಸೇನೆಯಿಂದ ನಿರ್ಗಮಿತ ತಹಶಿಲ್ದಾರವರಿಗೆ ಸನ್ಮಾನ; ವಾಲಿಬಾಲ್ ಆಟವಾಡಿ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿದ ಎಚ್.ಬಿ....

ಕರವೇ ಸ್ವಾಭಿಮಾನ ಸೇನೆಯಿಂದ ನಿರ್ಗಮಿತ ತಹಶಿಲ್ದಾರವರಿಗೆ ಸನ್ಮಾನ; ವಾಲಿಬಾಲ್ ಆಟವಾಡಿ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿದ ಎಚ್.ಬಿ. ಜೈಕುಮಾರ್

ಸಕಲೇಶಪುರ:- ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ವತಿಯಿಂದ ಗುಲಗಳಲೆ ಗ್ರಾಮದಲ್ಲಿ ನಡೆಯುತ್ತಿರುವ ವಾಲಿಬಾಲ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಹಶೀಲ್ದಾರ್ ಎಚ್,ಬಿ ಜೈಕುಮಾರ್ ರವರನ್ನು ಸಂಘಟನೆಯ ವತಿಯಿಂದ ಅತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜೈಕುಮಾರ್ ತಾಲೂಕಿನಲ್ಲಿರುವ ಕನ್ನಡ ಪರ ಸಂಘಟನೆಗಳು ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವು ಕೆಲಸ ಮಾಡಿದ್ದಾರೆ.ಮುಂದೆಯು ಕೂಡ ನಾಡು,ನುಡಿ ವಿಚಾರಕ್ಕೆ ದಕ್ಕೆಯಾದಗ ಗಟ್ಟಿ ದ್ವನಿಯಾಗಿ ಕಾರ್ಯನಿರ್ವಹಿಸಲಿ ಎಂದು ಹೇಳಿದರು.ತಾಲೂಕಿನಲ್ಲಿ ಇರುವಷ್ಟು ದಿನ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ.ಈಗ ಬಂದಿರುವ ತಹಶೀಲ್ದಾರ್ ರವರಿಗೂ ಸಹಕಾರ ನೀಡುವಂತೆ ಕಿವಿ ಮಾತು ಹೇಳಿದರು.
ಈ ವೇಳೆ ತಹಶೀಲ್ದಾರ್ ಸ್ವತಃ ವಾಲಿಬಾಲ್ ಆಡುವ ಮೂಲಕ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿದರು.
RELATED ARTICLES
- Advertisment -spot_img

Most Popular