ತೆಂಕಲಗೂಡು ಶ್ರೀಗಳ ಆಶೀರ್ವಾದ ಪಡೆದ ಕಟ್ಟೆಗದ್ದೆ ನಾಗರಾಜ್ ದಂಪತಿ.
ಸಕಲೇಶಪುರ : ಸಮಾಜ ಸೇವಕ, ಮಗ್ಗೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಮುಖಂಡ ಕಟ್ಟೆಗದ್ದೆ ನಾಗರಾಜ್ ರವರು ತಾಲೂಕಿನ ಯಸಳೂರು ಹೋಬಳಿಯ ತೆಂಕಲಗೂಡು ಬೃಹನ್ ಮಠದ ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ಆಶೀರ್ವಾದ ಪಡೆದರು.
ಮಂಗಳವಾರ ಸಂಜೆ ಬಾಳ್ಳುಪೇಟೆಯಲ್ಲಿರುವ ನಿವಾಸದಲ್ಲಿ ಶ್ರೀಗಳನ್ನು ಬರ ಮಾಡಿಕೊಂಡು ಕುಟುಂಬ ಸಮೇತರಾಗಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಇದೆ ವೇಳೆ ನಾಗರಾಜ್ ರವರ ನೆಡೆಸುತ್ತಿರುವ ಸಮಾಜ ಮುಖಿ ಕಾರ್ಯಗಳನ್ನು ಸ್ವಾಮಿಗಳು ಶ್ಲಾಘಸಿದರು.ಇದೆ ತಿಂಗಳು 28 ರಿಂದ ಮಠದಲ್ಲಿ ಪ್ರಾರಂಭವಾಗುವ ವಿವಿಧ ಧರ್ಮ ಕಾರ್ಯಗಳು ಹಾಗೂ ಧರ್ಮ ಸಮ್ಮೇಳನಕ್ಕೆ ಶ್ರೀಗಳು ಅಹ್ವಾನ ನೀಡಿದರು.