Monday, March 24, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ನಂಜಮ್ಮ ಮಹಿಳಾ ಸಮಾಜ ವತಿಯಿಂದ ಮಹಿಳಾ ದಿನಾಚರಣೆ.

ಸಕಲೇಶಪುರ : ನಂಜಮ್ಮ ಮಹಿಳಾ ಸಮಾಜ ವತಿಯಿಂದ ಮಹಿಳಾ ದಿನಾಚರಣೆ.

ಸಕಲೇಶಪುರ : ನಂಜಮ್ಮ ಮಹಿಳಾ ಸಮಾಜ ವತಿಯಿಂದ ಮಹಿಳಾ ದಿನಾಚರಣೆ.

ಸಕಲೇಶಪುರ : ಪಟ್ಟಣದ ನಂಜಮ್ಮ ಮಹಿಳಾ ಸಮಾಜದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

 ಪಟ್ಟಣದ ನಂಜಂಬ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚೆನ್ನವೇಣಿ ಎಂ ಶೆಟ್ಟಿ, ಮಹಿಳೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಮಹಿಳೆಯರಿಗೆ ಘನತೆ ಲಭಿಸುತ್ತದೆ. ಮಹಿಳೆಯರು ಜೀವನದಲ್ಲಿ ಯಾವುದೇ ಸಂಕಷ್ಟ ಎದುರಾದರೂ ಎದೆಗುಂದಬಾರದು. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುವ ಮನೋಬಲ ರೂಢಿಸಿಕೊಳ್ಳಬೇಕು ಎಂದರು. ಮಹಿಳೆಯರು ಸರಳ, ಸ್ವಾವಲಂಬನೆಯ ಜೀವನಶೈಲಿಗೆ ಒತ್ತು ನೀಡಿದರೆ ಕುಟುಂಬ ಹಾಗೂ ಸಮಾಜದಲ್ಲಿ ಸಮೃದ್ಧಿ ನೆಲೆಸಲಿದೆ ಎಂದು ತಿಳಿಸಿದರು.

 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರತಿಭಾ ಮಂಜುನಾಥ್, ಮಹಿಳೆ ಸ್ವಾವಲಂಬಿಯಾದರೆ ಕುಟುಂಬದ‌ ಏಳಿಗೆಯ ಜತೆಗೆ ದೇಶದ ಪ್ರಗತಿಯೂ ಸಾಧ್ಯವಾಗುತ್ತದೆ ಎಂದರು.ಈ ಜಗತ್ತಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ಹಿರಿದು. ಒಂದೆಡೆ ಇಡೀ ಸಂಸಾರವನ್ನು ಸಂಭಾಳಿಸಿಕೊಂಡು ಇನ್ನೊಂದೆಡೆ ಉದ್ಯೋಗದ ಸ್ಥಳದಲ್ಲಿಯೂ ದಕ್ಷ ವಾಗಿ ಕಾರ್ಯ ನಿರ್ವಹಿಸುವ ಆಕೆ ಗಟ್ಟಿಗಿತ್ತಿ ಮಹಿಳೆ ಎಂದರು.

ವಿವಿಧ ಕ್ಷೇತ್ರಗಳಲಿ ಸಾಧನೆ ಮಾಡಿದ ನಾಲ್ಕು ಮಹಿಳೆಯನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ನಂಜಮ್ಮ ಮಹಿಳಾ ಸಂಘದ ಅಧ್ಯಕ್ಷೆ ಕೌಸಲ್ಯ ಲಕ್ಷ್ಮಣಗೌಡ, ನಿರ್ಮಲ ಪವಿತ್ರನ್, ಸುಪ್ರಿಯಾ ರತನ್, ಶೋಭಾ ಮಂಜುನಾಥ್, ಸವಿತ ವಿಷ್ಣುಮೂರ್ತಿ, ರಾಗಿಣಿ ನಾಯ್ಡು, ಲತಾಶೆಟ್ಟಿ, ಜ್ಯೋತಿ ನಂದನ್ ಹಾಗೂ ಶಾರದಾ ಗುರುಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

RELATED ARTICLES
- Advertisment -spot_img

Most Popular