Friday, March 21, 2025
Homeಸುದ್ದಿಗಳುಸಕಲೇಶಪುರನೇಹಾ ಹಿರೇಮಠ್ ಹತ್ಯೆ: ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಕೆ 

ನೇಹಾ ಹಿರೇಮಠ್ ಹತ್ಯೆ: ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಕೆ 

ನೇಹಾ ಹಿರೇಮಠ್ ಹತ್ಯೆ: ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಕೆ 

ಸಕಲೇಶಪುರ : ಇಡೀ ದೇಶವೇ ಬೆಚ್ಚಿಬೀಳಿಸುವಂತ ಪೈಚಾಚಿಕ ಕೃತ್ಯ ರಾಜ್ಯದ ಹುಬ್ಬಳ್ಳಿಯಲ್ಲಿ ನೆಡೆದಿದೆ. ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಬಿವಿಬಿ ಕಾಲೇಜು ಆವರಣದಲ್ಲಿ ಗುರುವಾರ ಮಧ್ಯಾಹ್ನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಮೇಣದಬತ್ತಿ ಹಚ್ಚುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.

ತಾಲೂಕಿನ ಬಾಳ್ಳುಪೇಟೆಯ ಬಿ.ಜಿ ಗುರಪ್ಪ ವೃತ್ತದಲ್ಲಿ ಪಕ್ಷಾತೀತಾ ಜಾತ್ಯತೀತವಾಗಿ ಹತ್ಯೆಯನ್ನು ಖಂಡಿಸಿಲಾಯಿತು ಈ ಸಂಧರ್ಭದಲ್ಲಿ ಮಾತಾನಾಡಿದ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೇತ್ರಾವತಿ ಮಂಜುನಾಥ್,ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆಯಾಯ್ತೇ? ಹತ್ಯೆಗೆ ಲವ್ ಜಿಹಾದ್ ಕಾರಣ ತಿಳಿಯಬೇಕಿದೆ. ಒಟ್ಟಾರೆ ಆರೋಪಿಗೆ ಅಮಸಯಕ ಯುವತಿಯನ್ನು ಹತ್ಯೆ ಮಾಡಿದ ಆರೀಪಿಗೆ ಗಲ್ಲುಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

 

ಯುವ ಮುಖಂಡ ಪ್ರದೀಪ್ ನಿಡನೂರು ಮಾತನಾಡಿ,ರಾಜ್ಯದಲ್ಲಿ ಲವ್ ಜಿಹಾದ್‍ಗೆ ಮತ್ತೆ ಹಿಂದು ಯುವತಿ ಬಲಿಯಾಗಿದ್ದಾಳೆ. ಕೊಲೆ ಆರೋಪಿ ಫಯಾಜ್ ಪ್ರೀತಿಸುವ ಹೆಸರಿನಲ್ಲಿ ಜಿಹಾದ್ ಕೃತ್ಯ ಎಸಗಿದ್ದಾನೆ. ಕೂಡಲೇ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ವಿವಿಧ ಪಕ್ಷಗಳ ಕಾರ್ಯಕರ್ತರು,ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular