Sunday, January 18, 2026
Homeಸುದ್ದಿಗಳುಸಕಲೇಶಪುರಸಕಲೇಶಪುರ : ಭಾರಿ ಗಾಳಿ, ಮಳೆಗೆ ಮನೆಗಳು ಜಖಂ

ಸಕಲೇಶಪುರ : ಭಾರಿ ಗಾಳಿ, ಮಳೆಗೆ ಮನೆಗಳು ಜಖಂ

ಸಕಲೇಶಪುರ : ಭಾರಿ ಗಾಳಿ, ಮಳೆಗೆ ಮನೆಗಳು ಜಖಂ

ಸಕಲೇಶಪುರ : ಶುಕ್ರವಾರ ರಾತ್ರಿ ಭಾರಿ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ವಿವಿಧ ಕಡೆಗಳಲ್ಲಿ ನಷ್ಟ ಸಂಭವಿಸಿದೆ.

 ತಾಲೂಕಿನ ಬೈಕೆರೆ ಸಮೀಪದ ಅರಸು ನಗರದ ಚಂದ್ರು ಎಂಬುವರ ಮನೆಯ ಮೇಲ್ಚಾವಣಿಯ ಶೀಟುಗಳು ಸಂಪೂರ್ಣವಾಗಿ ಹಾರಿ ಹೋಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಇದೇ ಮನೆ ಪಕ್ಕದಲ್ಲಿರುವ ಥೋಮಸ್ ಹಾಗೂ ಸಲೀಂ ಎಂಬುವರ ಮನೆಗೂ ಹಾನಿಯಾಗಿದೆ. ಸುಂಡೆಕೆರೆಯಲ್ಲಿ ಜೋಸೆಫ್ ಜಾಕಬ್ ಪಿಂಟೊ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಒಂದೆಡೆ ದಿಡೀರ್ ಮಳೆಯಿಂದ ಅವಾಂತರ ಸೃಷ್ಟಿಯಾದರೆ ಮತ್ತೊಂದೆಡೆ ರೈತರು ಹಾಗೂ ಬೆಳೆಗಾರರ ಮುಖದಲ್ಲಿ ನಗು ತರಿಸಿದೆ.

RELATED ARTICLES
- Advertisment -spot_img

Most Popular