“ವಳಲಹಳ್ಳಿ ಗ್ರಾಮಪಂಚಾಯಿತಿ ರೈತರಿಂದ ಶುಕ್ರವಾರ ರಸ್ತೆ ತಡೆ ಹಾಗೂ ಪ್ರತಿಭಟನೆ.”.
‘ಸತತ ಕಾಡಾನೆ ಹಾವಳಿ,/ಮತದಾನ ಬಹಿಷ್ಕಾರ ಹಾಗೂ ವಿಧಾನಸೌಧ ಮುತ್ತಿಗೆ.
ಸಕಲೇಶಪುರ: ತಾಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಎರಡು ವಾರಗಳಿಂದ ಕಾಡಾನೆ ಹಾವಳಿ ಹೆಚ್ಚಿದ್ದು, ಈಗ ಕಟಾವಿಗೆ ಬಂದ ಭತ್ತ ಕಾಫಿ, ಫಸಲಿಗೆ ಕಾಡಾನೆ ಹಿಂಡು ಕಂಟಕವಾಗಿದೆ .ಪ್ರತಿದಿನ ಕಾಡಾನೆಗಳು ಈ ಭಾಗದ ರೈತರ ತೋಟ ಹಾಗೂ ಗದ್ದೆಗೆ ಬಂದು ರಂಪಾಟ ನೆಡಸುತಿದ್ದು.ಗ್ರಾಮಪಂಚಾಯಿತಿ ಕೆಲವು ಊರುಗಳಲ್ಲಂತು ಬೀಡು ಬಿಟ್ಟ ಐದಾರು ಆನೆಗಳು ರೈತರ ಕಣ್ಣಲ್ಲಿ ನೀರು ಬರಿಸುವಂಥ ಪರಿಸ್ಥಿತಿ ತಂದೊಡ್ಡಿದವೆ. ಪ್ರತಿ ದಿನ ರೈತರು ಬೆಳಗ್ಗೆ ಎದ್ದ ಕೂಡಲೇ ಇವತ್ತು ಯಾರ ಮನೆ ತೋಟ ಗದ್ದೆಯನ್ನು ನಾಶ ಮಾಡಿದೆ, ಆನೆಗಳು ಎಲ್ಲಿ ಬೀಡುಬಿಟ್ಟಿದ್ದವೆ,ನಮ್ಮ ಗದ್ದೆ ತೋಟದ ಗತಿ ಏನು ಎಂಬ ಹೆದರಿಕೆಯಲ್ಲಿ ತೋಟಗದ್ದೆಗೆ ಹೋಗದೆ ಮನೆಯಲ್ಲೇ ಕುಳಿತು ಜೀವನ ನಡೆಸುವಂತಹ ಪರಿಸ್ಥಿತಿ ಉಂಟಾಗಿದೆ. ಈ ಭಾಗದ ರೈತರಿಗೆ ಈಗ ಫಸಲನ್ನು ತೆಗೆದುಕೊಳ್ಳುವ ಕಾಲ. ಆದರೆ ಕೈಗೆ ಬಂದದ್ದು ಬಾಯಿ ಬರಲಿಲ್ಲ ಎಂಬತಾಗಿರುವುದು ನಿಜ.ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 12 ಆನೆಗಳು ಬಿಡು ಬಿಟ್ಟಿದ್ದು ಪ್ರತಿದಿನ ಊರಿಂದ ಊರಿಗೆ ಹೋಗಿ ತೋಟ ಗದ್ದೆ ನಾಶ ಮಾಡುತ್ತಾ ತಿರುಗುತ್ತಿವೆ. ರಾತ್ರಿ ಗದ್ದೆ ಯಲ್ಲಿ ಭತ್ತತಿಂದು ಬೆಳಗ್ಗೆ ಕಾಫಿ ತೋಟಕ್ಕೆ ನುಗ್ಗಿ ಅಲ್ಲೇ ಬಿಡು ಬಿಟ್ಟು, ತೋಟದಲ್ಲಿ ,ಬೈನೆ ,ಅಡಕೆ ಮರಗಳನ್ನು ನೆಲಸಮ ಮಾಡುವುದರ ಜೊತೆಗೆ ಕೊಯ್ಲಿಗೆ ಬಂದ ಕಾಫಿ ಗಿಡಗಳನ್ನು ಕಿತ್ತು ಎಸೆಯುವುದು ಹಾಗೂ ಮುರಿದು ರಂಪಾಟ ಮಾಡುತ್ತಿವೆ. ಇಷ್ಟೆಲ್ಲಾ ಸಮಸ್ಯೆಗಳು ಕಳೆದ ಎರಡು ತಿಂಗಳಿಂದ ಇದ್ದು ಈಗ ಹೆಚ್ಚಾಗಿದ್ದು ಇದ್ದರೂ ಕೂಡ ಈ ಭಾಗಕ್ಕೆ ಯಾವ ಜನ ಪ್ರತಿನಿಧಿಗಳು ಹಾಗೂ ಉನ್ನತಮಟ್ಟದ ಅಧಿಕಾರಿಗಳು ಬಂದಿಲ್ಲದಿರುವುದು ಹಾಗೂ ಹೊಸದಾಗಿ ರಚಿತವಾದ ಕಾಡಾನೆ ಟಾಸ್ಕ್ ಫೋರ್ಸ್ ಕೂಡ ಈ ಕಡೆ ಗಮನಹರಿಸದೆ ಇರುವುದು, ನೊಂದ ರೈತರು ರೋಸಿ ಹೋಗುವಂತೆ ಮಾಡಿದೆ.ವಳಲಹಳ್ಳಿ ಗ್ರಾಮಪಂಚಾಯಿತಿ ರೈತರು ಸರ್ಕಾರದ ಈ ನಿರ್ಲಕ್ಷಕ್ಕೆ ಪ್ರತಿಕಾರವಾಗಿ ದಿನಾಂಕ:- 2-12-22 ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಹಿರಿಯೂರು ಕೂಡಿಗೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಗ್ರಾಮದ ರೈತರು, ಎಲ್ಲಾ ಪಕ್ಷದ ಸ್ಥಳೀಯ ನಾಯಕರು, ಬೆಳೆಗಾರ ಸಂಘದವರು, ಸ್ಥಳೀಯ ಹೋರಾಟಗಾರರು, ಸ್ತ್ರೀಶಕ್ತಿ ಸಂಘದವರು, ವಿದ್ಯಾರ್ಥಿಗಳು ಹಾಗೂ ವರ್ತಕರು ಸೇರಿದಂತೆ ಬೃಹತ್ ಮಟ್ಟದಲ್ಲಿ ರಸ್ತೆ ತಡೆ ಹಾಗೂ ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ಗಮನವನ್ನು ಇತ್ತ ಸೆಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಪ್ರತಿಭಟನೆಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರಿಂದ ದೊಡ್ಡಮಟ್ಟದ ಹೋರಾಟದ ಜೊತೆಗೆ ಮತದಾನ ಬಹಿಷ್ಕಾರ ಮಾಡುವುದರೊಂದಿಗೆ ವಿಧಾನಸೌಧದ ಮುತ್ತಿಗೆಗೂ ಮುಂದಾಗಿದ್ದಾರೆ. ರೈತರ ಸಮಸ್ಯೆಗೆ ರೈತರೆಲ್ಲ ಒಂದಾಗಿ ಪ್ರತಿಭಟನೆ ಎಂಬ ಮೊದಲ ಹೆಜ್ಜೆಗೆ ಎಲ್ಲಾ ಸಂಘಟನೆಗಳು ಪ್ರಗತಿಪರ ಚಿಂತಕರು, ಸ್ಥಳೀಯ ನಾಯಕರು ಸಂಘ ಸಂಸ್ಥೆಗಳು ಕೈಜೋಡಿಸಿದ್ದು ಶುಕ್ರವಾರ ಬೃಹತ್ ಮಟ್ಟದ ಪ್ರತಿಭಟನೆಯಾಗಲಿದ್ದು, ನಿರ್ಲಕ್ಷಕ್ಕೆ ಒಳಗಾದ ಈ ಭಾಗದ ರೈತರ ಸಮಸ್ಯೆಗೆ ಪರಿಹಾರವೆಂಬ ಕನಸು ನನೆಸಾಗುತ್ತದೆಯೆ ಎಂದು ಕಾದು ನೋಡಬೇಕಾಗಿದೆ.