ಕೊಲೆ ಪ್ರಕರಣ ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ರಚನೆ
ಹಾಸನ: ಸಕಲೇಶಪುರ-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75 ರ ಬಳಿಯ ಶಿರಾಡಿಘಾಟ್‌ನಲ್ಲಿ ದೊರೆತಿದ್ದ ಅಪರಿಚಿತ ಮಹಿಳೆ ಶವದ ಪೂರ್ವಾಪರ ಪತ್ತೆಗೆ ವಿಶೇಷ ತನಿಖಾ ತಂಡಗಳನ್ನು ರಚನೆ ಮಾಡಲಾಗಿದೆ.
ಈ ಕುರಿತು ಇಂದು ಜಿಲ್ಲೆಯ ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್, ಪಿಎಸ್‌ಐ ಗಳೊಂದಿಗೆ ಸಭೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹಾಗೂ ಎಎಸ್ಪಿ ತಮ್ಮಯ್ಯ, ನಿಗೂಢವಾಗಿರುವ ಅಪರಿಚಿತ ಮಹಿಳೆ ಕೊಲೆ ಪ್ರಕರಣವನ್ನು ಆದಷ್ಟು ಬೇಗ ಪತ್ತೆ ಹಚ್ಚಿಸುವಂತೆ ತನಿಖಾ ತಂಡಕ್ಕೆ ಸೂಚಿಸಿದ್ದಾರೆ.
ನ.15 ರಂದು ಶಿರಾಡಿ ಘಾಟ್ ಬಳಿ ಸುಮಾರು 25-30 ವಯಸ್ಸಿನ ಅಪರಿಚಿತ ಹೆಂಗಸಿನ ಶವ ದೊರೆತಿತ್ತು.
ವೋಡಾಫೋನ್ ಸಿಂಬಲ್ ಇರುವ ಕೆಂಪು ಗುಲಾಬಿ ಬಣ್ಣದ ಟೀಶರ್ಟ್ ಹಾಗೂ ಕಪ್ಪು ಬೂದು ಬಣ್ಣದ ಶಾಟ್ಸ್ ಧರಿಸಿದ್ದು, ಬಲ ಮುಂಗೈನಲ್ಲಿ ಶಿವನ ಜಡೆ ಮಾದರಿಯ ಒಂದು ಟ್ಯಾಟೂ ಮಾರ್ಕ್, ಬಲ ಕೈ ನಲ್ಲಿ ಸ್ಟೀಲ್ ಬ್ರಾಸ್ ಲೈಟ್, ಎಡ ಕೈ ನಲ್ಲಿ ಅರಿಶಿಣ ದೇವರ ದಾರ, ತಾಮ್ರದ ಸರವಿರುವ ಎರಡು ಕೆಂಪು, ಎರಡು ಕಪ್ಪು ಮಣಿಗಳು ಹಾಗೂ ಎರಡು ಚಿನ್ನದ ಗುಂಡು ಇರುವ ತಾಳಿ, ಸ್ಟೀಲ್ ಕಾಲ್ ಚೈನು, ಎರಡು ಕಾಲುಂಗುರ ಧರಿಸಿದ್ದು, ಮೃತದೇಹ ಸಂಪೂರ್ಣ ಕೊಳೆತಿದೆ. ಈ ರೀತಿಯ ಹೋಲಿಕೆ ಇರುವ ಮಹಿಳೆ ಕಾಣೆಯಾಗಿರುವ ಬಗ್ಗೆ ಮಾಹಿತಿ ಇದ್ದಲ್ಲಿ ಹಾಸನ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ 9480804787 ಸಕಲೇಶಪುರ ಉಪವಿಭಾಗ ಎಎಸ್‌ಪಿ 9480804723 ಸಕಲೇಶಪುರ ವೃತ್ತ ಸಿಪಿಐ 9480804733 ಸಕಲೇಶಪುರ ಗ್ರಾಮಾಂತರ ಠಾಣೆ ಪಿಎಸ್‌ಐ 9480804761 ಈ ನಂಬರ್ ಗಳನ್ನು ಸಂಪರ್ಕಿಸಿ ಮಾಹಿತಿ ನೀಡಲು ಕೊರಲಾಗಿದೆ.