ಸಕಲೇಶಪುರ: ಪಟ್ಟಣದ ಲಯನ್ಸ್ ಭವನದಲ್ಲಿ ಆಯೋಜಿಸಲಾಗಿದ್ದ ವಿಸ್ತಾರ ನ್ಯೂಸ್ ವಾಹಿನಿ ಬಿಡುಗಡೆ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗುವ ಮುಖಾಂತರ ನೆರವೇರಿಸಿದರು. ಕಾರ್ಯಕ್ರಮದ ಅಂಗವಾಗಿ ಕುಮಾರಿ ಜೀವಿತಾರವರಿಂದ ಭರತನಾಟ್ಯ ಹಾಗೂ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಂಗವಾಗಿ ಸಕಲೇಶಪುರ ಪಟ್ಡಣದ ಕ್ರಾಫರ್ಡ್ ಆಸ್ಪತ್ರೆ ವೈದ್ಯ ಡಾ.ಮಧುಸೂಧನ್, ಕ್ರೀಡಾಪಟು ಹೆತ್ತೂರಿನ ದುರ್ಗೇಶ್ ಮೌರ್ಯ, ಹೋರಾಟಗಾರ ಯಡೇಹಳ್ಳಿ ಮಂಜುನಾಥ್ ರವರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಂಧರ್ಭದಲ್ಲಿ ತೆಂಕಲಗೂಡು ಮಠದ ಚನ್ನಸಿದ್ದೇಶ್ವರ ಸ್ವಾಮೀಜಿ, ಶಾಸಕ ಎಚ್.ಕೆ ಕುಮಾರಸ್ವಾಮಿ, ಪುರಸಭಾ ತಾಲೂಕು ಅಧ್ಯಕ್ಷ ಕಾಡಪ್ಪ, ಕಸಾಪ ತಾಲೂಕು ಅಧ್ಯಕ್ಷೆ ಶಾರದಾ ಗುರುಮೂರ್ತಿ, ಬಿಜೆಪಿ ಮುಖಂಡ ಸಿಮೆಂಟ್ ಮಂಜು, ಲಯನ್ಸ್ ತಾಲೂಕು ಅಧ್ಯಕ್ಷ ಜಯಶಂಕರ್, ಕರವೇ ಜಿಲ್ಲಾ ಮುಖಂಡ ರಘು ಪಾಳ್ಯ, ಬಿಜೆಪಿ ತಾಲೂಕು ಅಧ್ಯಕ್ಷ ಸಿಮೆಂಟ್ ಮಂಜುನಾಥ್, ಕಾಂಗ್ರೆಸ್ ಮುಖಂಡ ಭುವನಾಕ್ಷ, ಬೆಳಗೋಡು ಹೋಬಳಿ ಕಸಾಪ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ವಿಸ್ತಾರ ತಾಲೂಕು ವರದಿಗಾರ ಪ್ರದೀಪ್ ಕುಮಾರ್, ವಿಸ್ತಾರ ಬಳಗದ ನಾಗರಾಜ್,ಅನಿಲ್ ಕುಮಾರ್, ಜೈಕುಮಾರ್, ರುದ್ರಕುಮಾರ್ ಸೇರಿದಂತೆ ಇತರರು ಹಾಜರಿದ್ದರು.
ತಾಜಾ ಸುದ್ದಿ