Thursday, March 20, 2025
Homeಸುದ್ದಿಗಳುಪೊಲೀಸ್ ಸಿಬ್ಬಂದಿಗಳಿಗೆ ಅರೋಗ್ಯದ ದೃಷ್ಟಿಯಿಂದ ಹೆಲ್ತ್ ಕಾರ್ಡ್ ವಿತರಣೆ.  ಪ್ರತಿ ತಿಂಗಳು ಪೊಲೀಸರ ಆರೋಗ್ಯದ...

ಪೊಲೀಸ್ ಸಿಬ್ಬಂದಿಗಳಿಗೆ ಅರೋಗ್ಯದ ದೃಷ್ಟಿಯಿಂದ ಹೆಲ್ತ್ ಕಾರ್ಡ್ ವಿತರಣೆ.  ಪ್ರತಿ ತಿಂಗಳು ಪೊಲೀಸರ ಆರೋಗ್ಯದ ಮಾಹಿತಿ ನೋಂದಣಿ  ಸಕಲೇಶಪುರದ ಗುರುವೇಗೌಡ ಸಮುದಾಯ ಭವನದಲ್ಲಿ ಜನಪ್ರಿಯ ಆಸ್ಪತ್ರೆ ವತಿಯಿಂದ ಅರೋಗ್ಯ ಶಿಬಿರ.

ಪೊಲೀಸ್ ಸಿಬ್ಬಂದಿಗಳಿಗೆ ಅರೋಗ್ಯದ ದೃಷ್ಟಿಯಿಂದ ಹೆಲ್ತ್ ಕಾರ್ಡ್ ವಿತರಣೆ.

 ಪ್ರತಿ ತಿಂಗಳು ಪೊಲೀಸರ ಆರೋಗ್ಯದ ಮಾಹಿತಿ ನೋಂದಣಿ

ಸಕಲೇಶಪುರದ ಗುರುವೇಗೌಡ ಸಮುದಾಯ ಭವನದಲ್ಲಿ ಜನಪ್ರಿಯ ಆಸ್ಪತ್ರೆ ವತಿಯಿಂದ ಅರೋಗ್ಯ ಶಿಬಿರ.

ಸಕಲೇಶಪುರ : ಪೊಲೀಸ್‌ ಸಿಬ್ಬಂದಿಗಳ ಆರೋಗ್ಯವನ್ನು ಪ್ರತಿ ತಿಂಗಳು ತಪಾಸಣೆ, ಎಲ್ಲ ಮಾಹಿತಿಗಳನ್ನು ದಾಖಲಿಸಲಾಗುತ್ತದೆ. ಹೀಗಾಗಿ ಅವರ ಆರೋಗ್ಯದ ಸ್ಥಿತಿಗತಿಯ ಚಿತ್ರಣ ಸಿಗುವುದರಿಂದ ಅವರಿಗೆ ಅಗತ್ಯವಿರುವ ಚಿಕಿತ್ಸೆ ಕೊಡಿಸಲು, ಮಾನಸಿಕ ಒತ್ತಡ ತಡೆಯುವುದರ ಜತೆಗೆ ಆರೋಗ್ಯ ಸುಧಾರಿಸಲು ಕ್ರಮ ಕೈಗೊಳ್ಳಲು ಸಹಕಾರಿಯಾಗುವ ನಿಟ್ಟಿನಲ್ಲಿ ಇಂದು ಸಕಲೇಶಪುರದ ಗುರುವೇ ಗೌಡ ಸಮುದಾಯ ಭವನದಲ್ಲಿ ಪೊಲೀಸರಿಗೆ ಆರೋಗ್ಯ ತಪಾಸಣೆ ನಡೆಯಿತು.

ಸಿಬ್ಬಂದಿ ಆರೋಗ್ಯ ಚೆನ್ನಾಗಿದ್ದರೆ, ಜನರ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದುಕೊಂಡು ಹೆಲ್ತ್‌ಕಾರ್ಡ್‌ ನೀಡಲು ಪೋಲಿಸ್ ಇಲಾಖೆ ಮುಂದಾಗಿದ್ದು ಸಕಲೇಶಪುರ ನಗರ, ಗ್ರಾಮಾಂತರ, ಯಸಳೂರು, ಅರೆಹಳ್ಳಿ ಠಾಣೆಗಳ ಸುಮಾರು 150ಕ್ಕೂ ಹೆಚ್ಚು ಪೊಲೀಸರಿಗೆ ಹಾಸನದ ಜನಪ್ರಿಯ ಆಸ್ಪತ್ರೆಯ ವತಿಯಿಂದ ಬಿಪಿ, ಶುಗರ್, ಕಣ್ಣಿನ ಪರೀಕ್ಷೆ ಸೇರಿದಂತೆ ಇನ್ನಿತರ ಆರೋಗ್ಯ ಸೇವೆಗಳ ತಪಾಸಣೆ ನಡೆಯಿತು.

 ಈ ವೇಳೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್, ನಗರ ಠಾಣೆ ಪಿಎಸ್ಐ ಶಿವಶಂಕರ್ ಸೇರಿದಂತೆ ಮುಂತಾದವರಿದ್ದರು.

RELATED ARTICLES
- Advertisment -spot_img

Most Popular