Monday, April 21, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಕರ್ನಾಟಕ ರಕ್ಷಣಾ ವೇದಿಕೆಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ.

ಸಕಲೇಶಪುರ : ಕರ್ನಾಟಕ ರಕ್ಷಣಾ ವೇದಿಕೆಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ.

ಸಕಲೇಶಪುರ : ಕರ್ನಾಟಕ ರಕ್ಷಣಾ ವೇದಿಕೆಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ.

ಸಕಲೇಶಪುರ : ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ )ಬಣದಿಂದ ನಗರದ ಲಯನ್ಸ್ ಭವನದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು.

 

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ Dysp ಮಿಥುನ್ ಮಾತನಾಡಿ,ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಗಳಿಗೆ ಭಾಗವಹಿಸುವುದು ನನ್ನ ಕರ್ತವ್ಯ. ಶಾಲಾ, ಕಾಲೇಜ್ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವುದು ಒಂದು ಸಂತೋಷ ವಿಚಾರ.

1956 ರಲ್ಲಿ ಹರಿದು ಹಂಚಿ ಹೋಗಿದ್ದು ಏಕೀಕರಣದಿಂದ ಎಲ್ಲರು ಒಗ್ಗಡುವು ಇತಿಹಾಸಿಕ ಸಂಧರ್ಭ ಅದು. ಉದಯವಾಗಲಿ ಕನ್ನಡ ನಾಡು ಎಂಬ ನುಡಿ ಈಗ ಪಕ್ವವಾಗುತ್ತಿದೆ.

ಕನ್ನಡ ಭಾಷೆ, ನೆಲ ಜಲಕ್ಕೆ ಅನ್ಯಾಯವಾದಗ ಹೋರಾಟ ಮಾಡಬೇಕಾದ ಅನಿವಾರ್ಯಯತೆಯತೆ ಇದೆ ಈ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳ ಅಗತ್ಯವಿದೆ.

ಕನ್ನಡ ಭಾಷೆಯನ್ನು ನಮ್ಮ. ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಬಳಸುತ್ತಾ ಬೆಳಸಬೇಕು ಜೊತೆಗೆ ಬೇರೆ ಭಾಷೆಯ ಬಗ್ಗೆ ಮಡಿವಂತಿಕೆ ಬೇಡ. ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸು ಜೊತೆಗೆ ಕನ್ನಡ ಭಾಷೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕೆಲಸವಾಗಬೇಕು.ಕನ್ನಡ ಉತ್ಸವ ಕೇವಲ ನವಂಬರ್ ತಿಂಗಳಿಗೆ ಸೀಮಿತವಾಗದೆ ವರ್ಷ ಪೂರ್ತಿ ಆಚರಿಸುವಂತಾಗಲಿ ಎಂದು ಆಶೀಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ್ ಮಾತನಾಡಿ, ಕನ್ನಡವನ್ನು ನಾವು ಕಲಿಯುವುದರ ಜೊತೆಗೆ ಅನ್ಯ ಭಾಷೆಯವರಿಗೂ ಕಲಿಸುವ ಕೆಲಸವಾಗಬೇಕು. ದಶ ದಿಕ್ಕುಗಳಲ್ಲಿ ಕನ್ನಡ ಭಾಷೆ ಪಸರುಸುವಂತೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್ ಮಾತನಾಡಿದರು

 

ಪ್ರಾಂಶುಪಾಲ ರಮೇಶ್ ಮಾತನಾಡಿ, ಕನ್ನಡ ಶ್ರೀಮಂತ ಭಾಷೆ, ಕನ್ನಡ ಪ್ರಾಚೀನ ಕಾಲದ ಲಿಪಿಯನ್ನು ಹೊಂದಿರುವ ಭಾಷೆಯಾಗದೆ. ಕನ್ನಡ ಭಾಷೆ ಬಳಸುವವಾಗ ಏನೋ ರೋಮಾಂಚನವಾಗುತ್ತದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಕನ್ನಡ ಭಾಷೆಗಿದೆ. ಕನ್ನಡದ ಬಗ್ಗೆ ಎಷ್ಟು ಮಾತಾನಾಡಿದರು ಸಾಲದು. ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಎಲ್ಲರು ತಮ್ಮ ಜವಾಬ್ದಾರಿ ಹರಿಯಬೇಕು. ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರಬೇಕು ಕಡಿಮೆ ಸಂಖ್ಯೆಯಲ್ಲಿ ಜನ ಸೇರಿರುವುದನ್ನು ವಿಷಾದಿಸಿದರು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ್,ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ, ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಮೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಶಾರದಾ ಗುರುಮೂರ್ತಿ ,ದಲಿತ ಸಂಘಟನೆಯ ಮುಖಂಡ ಹೆತ್ತೂರು ದೊಡ್ಡಯ್ಯ ಟಿಎಪಿಸಿಎಸ್ ನ ಅಧ್ಯಕ್ಷ ಕಿರುವಾಲೆ ಶಶಿ ಕುಮಾರ್ ಸೇರಿದಂತೆ ಇನ್ನಿತರದ್ದರು

RELATED ARTICLES
- Advertisment -spot_img

Most Popular