ಸಕಲೇಶಪುರ: ಚುನಾವಣೆಗೆ ಇನ್ನು 6 ತಿಂಗಳು ಇರುವ ಹಾಗೆಯ ತಾಲೂಕಿನಲ್ಲಿ ಚುನಾವಣೆ ಕಾವು ಪ್ರಾರಂಭವಾಗಿದ್ದು ರಸಿಕ ಎಂಬ ಜೆಡಿಎಸ್ ಕಾರ್ಯಕರ್ತ ಚಂಗಡಿಹಳ್ಳಿ ಗ್ರಾ.ಪಂ ಅಧ್ಯಕ್ಷೆ ಸುಧಾ ನವೀನ್ ಹಾಗೂ ಉಪಾಧ್ಯಕ್ಷ ಕುಮಾರಸ್ವಾಮಿರವರ ಮೇಲೆ ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ಪಟ್ಟಣದ ಕ್ರಾರ್ಫಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ವಿರುದ್ದ 2 ಬಾರಿ ಅವಿಶ್ವಾಸ ನಿರ್ಣಯಕ್ಕೆ ಯತ್ನಿಸಿ ವಿಫಲರಾದ ಹಿನ್ನೆಲೆಯಲ್ಲಿ ರಾಜಕೀಯ ವೈಷಮ್ಯದಿಂದ ವಿನಾಕಾರಣ ರಸಿಕ ಎಂಬುವರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆಸ್ಪತ್ರೆಗೆ ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್ ಭೇಟಿ ನೀಡಕ ಪ್ರಜಾಪ್ರಭುತ್ವದಲ್ಲಿ ವಾದ ವಿವಾದಗಳು ಸಹಜ, ಆದರೆ ಕ್ಷುಲಕ ಕಾರಣಕ್ಕೆ ನಮ್ಮ ಪಕ್ಷದವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ, ಹಲ್ಲೆ ಮಾಡಿದವನ ಮೇಲೆ ಕಾನೂನಿಂತೆ ಕ್ರಮ ಕೈಗೊಳ್ಳಬೇಕು ಎಂದರು. ನಮ್ಮ ಪಕ್ಷದ ಕಾರ್ಯಕರ್ತರಿಗೆ ಜೆಡಿಎಸ್ ಗೂಂಡಗಳಿಂದ ರಕ್ಷಣೆ ನೀಡಬೇಕು ಎಂದಿದ್ದಾರೆ.ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.