Monday, March 24, 2025
Homeಸುದ್ದಿಗಳುಸಕಲೇಶಪುರ : ಎರಡನೇ ದಿನಕ್ಕೆ ಕಾಲಿಟ್ಟ ನಿವೇಶನ ರಹಿತರ ಹೋರಾಟ. ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ...

ಸಕಲೇಶಪುರ : ಎರಡನೇ ದಿನಕ್ಕೆ ಕಾಲಿಟ್ಟ ನಿವೇಶನ ರಹಿತರ ಹೋರಾಟ. ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ಭೇಟಿ

ಎರಡನೇ ದಿನಕ್ಕೆ ಕಾಲಿಟ್ಟ ನಿವೇಶನ ರಹಿತರ ಹೋರಾಟ.

ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ಭೇಟಿ

ಸಕಲೇಶಪುರ : ಪುರಸಭಾ ವ್ಯಾಪ್ತಿಯಲ್ಲಿ ಅರ್ಹರಿಗೆ ನಿವೇಶನ ಮತ್ತು ವಸತಿಗಾಗಿ ಪಟ್ಟಿ ಬಿಡುಗಡೆ ಮಾಡುವಂತೆ  ಆಗ್ರಹಿಸಿ ನಿವೇಶನ ರಹಿತರ ಹಾಗೂ ಯೂತ್ ಕಾಂಗ್ರೇಸ್ ವತಿಯಿಂದ ಪುರಸಭಾ ಮುಂಭಾಗ ಪ್ರಾರಂಭವಾಗಿರುವ ಅನಿರ್ದಿಷ್ಟಾವಧಿ ಪ್ರತಿಭನಾ ಧರಣಿ ಮಂಗಳವಾರೆ ಎರಡನೇ ದಿನಕ್ಕೆ ಕಾಲಿಟ್ಟಿತ್ತು.

ಪಟ್ಟಣದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿವೇಶನ ಮತ್ತು ವಸತಿಗಾಗಿ ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದಾರೆ ಆದರೆ ಪ್ರತಿ ವರ್ಷ ನಿವೇಶನ ರಹಿತರ ಪಟ್ಟಿ ಬಿಡುಗಡೆ ಮಾಡುವುದು ಪುರಸಭೆಯವರ ಜವಾಬ್ದಾರಿಯಾಗಿದ್ದು ,ಇದೂವರೆಗೂ ಪುರಸಭೆ ನಿವೇಶನ ರಹಿತರ ಯಾವುದೇ ಪಟ್ಟಿ ಬಿಡುಗಡೆ ಮಾಡುವುದಾಗಲೀ,ನಿವೇಶನ ಹಂಚಿಕೆ ಮಾಡುವ ಕೆಲಸಕ್ಕೆ ಮುಂದಾಗದೆ ನೀರ್ಲಕ್ಷ ತೋರಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮಧ್ಯಾಹ್ನದ ವೇಳೆಗೆ ಉಪವಿಭಾಗಾಧಿಕಾರಿ ಅನುಮೋಲ್ ಜೈನ್ ಭೇಟಿ ನೀಡಿ ಪ್ರತಿಭಟನಾಕಾರದೊಂದಿಗೆ  ಸಂಧಾನ ಸಭೆ ನಡೆಸಿದರು.

RELATED ARTICLES
- Advertisment -spot_img

Most Popular