ಸಕಲೇಶಪುರ: ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸಕಲೇಶಪುರ-ಆಲೂರು ವಿಧಾನಸಭಾ ಕ್ಷೇತ್ರ ಮಾಜಿ ಶಾಸಕರಾದ ಹೆಚ್.ಎಂ. ವಿಶ್ವನಾಥ್‌ರವರ ಸಮ್ಮುಖದಲ್ಲಿ ಹಾಗೂ ಶಾಸಕರುಗಳಾದ ಸಿ.ಟಿ.ರವಿ, ಎಂ.ಕೆ.ಪ್ರಾಣೇಶ್, ಎಂ.ಪಿ.ಕುಮಾರಸ್ವಾಮಿ ಹೆಚ್.ಕೆ.ಕುಮಾರಸ್ವಾಮಿ, ಎ.ಟಿ.ರಾಮಸ್ವಾಮಿ, ಕೆ.ಎಸ್.ಲಿಂಗೇಶ್, ಟಿ.ಡಿ.ರಾಜೇಗೌಡ, ಪ್ರೀತಂಗೌಡ, ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್‌ರವರ ಸಹಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ತಂಡ
ಮಾನ್ಯ ಮುಖ್ಯಮಂತ್ರಿಯವರಾದ ಸನ್ಮಾನ್ಯ ಬಸವರಾಜು ಬೊಮ್ಮಾಯಿವರನ್ನು,ಕಂದಾಯ ಸಚಿವರಾದ ಆರ್.ಅಶೋಕ್‌ರವರನ್ನು , ಇಂಧನ ಸಚಿವರಾದ ಸುನಿಲ್ ಕುಮಾರ್‌ರವರನ್ನು, ಸಹಕಾರಿ ಸಚಿವರಾದ ಸೋಮಶೇಖರ್‌ರವರನ್ನು, ಸ್ಪೀಕರ್‌ರವರಾದ ವಿಶ್ವೇಶ್ವರ ಹೆಗ್ಗಡೆ ಕಾಗೇರಿಯವರನ್ನು ಉಪ ಸ್ಪೀಕರ್ ಕುಮಾರಬಂಗಾರಪ್ಪರವರನ್ನು, ಮತ್ತು ವಿಧಾನಪರಿಷತ್ ಸಭಾಪತಿ ಬಸವರಾಜು ಹೊರಟ್ಟಿಯವರನ್ನು ಭೇಟಿ ಮಾಡಲಾಗಿರುತ್ತದೆ.
ನಂತರ ವಿರೋಧಪಕ್ಷದ ನಾಯಕರುಗಳಾದ ಸಿದ್ದರಾಮಯ್ಯನವರನ್ನು, ಹೆಚ್.ಡಿ.ರೇವಣ್ಣರವರನ್ನು ಸಹಾ ಭೇಟಿಮಾಡಿ ಬೆಳೆಗಾರರ ಪರವಾಗಿ ಅಧಿವೇಶನದಲ್ಲಿ ಸರ್ಕಾರಿ ಒತ್ತುವರಿ ಭೂಮಿಯನ್ನು ಗುತ್ತಿಗೆಯಲ್ಲಿ ನೀಡುವ ಮಸೂದೆ ಮಂಡಿಸುವಾಗ ಸಹಕಾರ ಕೊಡಭೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಫಿಬೆಳೆಗಾರರ ಈ ಕೆಳಕಂಡ ಪ್ರಮುಖವಾದ ಬೇಡಿಕೆಗಳನ್ನು ಸಂಬಂಧಪಟ್ಟ ಸಚಿವರುಗಳಿಗೆ ಮನವಿ ಮಾಡಲಾಯಿತು.
” ರಾಜ್ಯದಲ್ಲಿ ಇತರೆ ರೈತರಿಗೆ ಉಚಿತ ವಿದ್ಯುತ್ ನೀಡುವ ವ್ಯವಸ್ಥೆಯನ್ನು ಕ್ರಮವಹಿಸಿರುವಂತೆ ಹತ್ತು ಹೆಚ್.ಪಿ. ವಿದ್ಯುತ್ ಪಂಪ್‌ಸೆಟ್‌ವುಳ್ಳ ಕಾಫಿಬೆಳೆಗಾರರಿಗೂ ಸಹಾ ಅದೇ ಮಾದರಿಯಲ್ಲಿ ಮಾಡಿಕೊಡಬೇಕಾಗಿ ಮನವಿ ಮಾಡಲಾಯಿತು.
” ಸರ್ಕಾರಿ ಜಮೀನು ಒತ್ತುವರಿ ಸಮಸ್ಯೆಗೆ ಸಂಬಂಧಪಟ್ಟಂತೆ ಈಗಾಗಲೇ ಕಾಫಿಬೆಳೆಗಾರರ ಪರವಾಗಿ ಸದನದಲ್ಲಿ
ಬಿಲ್‌ಪಾಸ್ ಆಗಿರುವುದು ಸರಿಯಷ್ಟೆ. ಅದಕ್ಕೆ ಆಡಿನೆನ್‌ಸ್ ಹೊರಡಿಸಬೇಕಾಗಿರುವುದು ಬಾಕಿ ಉಳಿದಿರುತ್ತದೆ. ಆದ್ದರಿಂದ ಕಾಫಿ ಬೆಳೆಗಾರರು ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿರುವ ಎಲ್ಲಾ ಕಾಫಿಬೆಳೆಗಾರರ ಜಮೀನುಗಳನ್ನು ಗುತ್ತಿಗೆ ಆಧಾರದಲ್ಲಿ ನೀಡುವಂತೆ ಮನವಿ ಮಾಡಲಾಯಿತು.
” ಕಾಫಿ ಬೆಳೆಯುವ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳನ್ನು ವಿಶೇಷವಾಗಿ ಪರಿಗಣಿಸಿ ಇಲ್ಲಿನ ಕಾಫಿ ಬೆಳೆಗಾರರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್‌ಗಳಲ್ಲಿ ಪಡೆದ ಎಲ್ಲಾ ಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಿ, ಅಸಲನ್ನು ಕಂತುಗಳ ರೂಪದಲ್ಲಿ ಪಾವತಿಸಲು ಅವಕಾಶ ಮಾಡಿಕೊಡಬೇಕಾಗಿ ಮನವಿ ಮಾಡಲಾಯಿತು.
ಈ ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ, ಉಪಾಧ್ಯಕ್ಷರಾದ ಬಿ.ಎಂ.ನಾಗರಾಜು, ಸಂಘಟನಾ ಕಾರ್ಯದರ್ಶಿ ಎ.ಎನ್.ನಾಗರಾಜು, ನಿರ್ದೇಶಕರುಗಳಾದ ಬಿ.ಜಿ.ಯತೀಶ್, ಎಂ.ಹೆಚ್.ಪ್ರಕಾಶ್ ಹಾಜರಿದ್ದರು. .