ಕರ್ನಾಟಕ ರಣಧೀರರ ಕಪ್ ಪ್ರಥಮ ಸ್ಥಾನ ಮುಡಿಗೇರಿಸಿಕೊಂಡ ಬಾಳ್ಳುಪೇಟೆ ತಂಡ
ಸಕಲೇಶಪುರ :- ತನ್ನ ಅಮೋಘ ಪ್ರದರ್ಶನದಿಂದ ತಾಲೂಕಿನ ಬಾಳ್ಳುಪೇಟೆಯ ಬಿ. ಸಿದ್ದಣ್ಣಯ್ಯ ಪ್ರೌಢಶಾಲಾ ಆಟದ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯದಲ್ಲಿ ಭುವನೇಶ್ವರಿ ಬಾಳ್ಳುಪೇಟೆ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಬಾಳ್ಳುಪೇಟೆ,ಬನವಾಸೆ ಯುವಕರ ವತಿಯಿಂದ ನಡೆದ ಕರ್ನಾಟಕ ರಣಧೀರದ ಕಪ್ ಪ್ರಥಮ ವರ್ಷದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು.
ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವನ್ನು ಹಾನುಬಾಳು ಕೂಡಿಗೆ ತಂಡ, ತೃತೀಯ ಸ್ಥಾನವನ್ನು ಮಠಸಾಗರ ತಂಡ, ನಾಲ್ಕನೇ ಸ್ಥಾನವನ್ನು ಬಂದಿಹಳ್ಳಿ ತಂಡ ತಮ್ಮದಾಗಿಸಿಕೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಣಧೀರ ಸೇನೆಯ ತಾಲೂಕು ಅಧ್ಯಕ್ಷ ಪೃಥ್ವಿ ಬನವಾಸೆ, ಕ್ರೀಡಾಕೂಟಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಬೆಳಗೋಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷ ಪ್ರಮೋದ್, ಉಪ ಕಾರ್ಯದರ್ಶಿ ಸಚಿನ್ ಸೇರಿದಂತೆ ಮುಂತಾದವರಿದ್ದರು.