ಸಕಲೇಶಪುರ: ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 9 ವರ್ಷಗಳಿಂದ ನೆಲೆಸಿ 4 ವಿವಿಧ ಚುನಾವಣೆಗಳಲ್ಲಿ ಮತದಾನ ಮಾಡಿರುವುದರಿಂದ ನಾನು ಸಹ ಸ್ಥಳೀಯನೆ ಆಗಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಹೇಳಿದ್ದಾರೆ.
ಕ್ಷೇತ್ರದಲ್ಲಿ ಕೂಗೆದ್ದಿರುವ ಮೂಲನಿವಾಸಿ ಹಾಗೂ ಹೊರಗಿನ ಅಭ್ಯರ್ಥಿ ಗೊಂದಲದ ಕುರಿತು ವಾಸ್ತವ ನ್ಯೂಸ್ ನೊಂದಿಗೆ ಪತ್ರಿಕ್ರಿಯಿಸಿ ಚುನಾವಣೆಗೆ ಸ್ಫರ್ಧಿಸುವುದಕ್ಕಾಗಿ ಕ್ಷೇತ್ರಕ್ಕೆ ಧಿಡೀರ್ ಎಂದು ಬಂದಿಲ್ಲ. ಕಳೆದ 9 ವರ್ಷಗಳಿಂದ ಕ್ಷೇತ್ರದಲ್ಲಿ ಬೀಡುಬಿಟ್ಟು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕಳೆದ 5 ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುತ್ತಿದ್ದೇನೆ. ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದ ಮೂಲೆ ಮೂಲೆಗಳಿಗೆ ತಿರುಗುತ್ತಿದ್ದೇನೆ. ದೇಶದ ಪ್ರಜೆಯಾಗಿ ಗುರುತಿನ ಚೀಟಿ ಹೊಂದಿದ್ದರೆ ಯಾರು ಎಲ್ಲಿ ಬೇಕಾದರು ಚುನಾವಣೆಯಲ್ಲಿ ಸ್ಫರ್ಧಿಸಬಹುದು. ಬಾಬಾಸಾಹೇಬರು ಬರೆದಿರುವ ಕಾನೂನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವರು ವಿನಾ ಕಾರಣ ಟೀಕೆ ಮಾಡುತ್ತಿದ್ದಾರೆ. ಚುನಾವಣೆಗೆ ನಿಲ್ಲುವುದು ಬಿಡುವುದರ ಕುರಿತು ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಹಾಗೂ ನನ್ನ ಪರ ಮತದಾನ ಮಾಡುವುದೋ ಬಿಡುವುದೋ ಎಂದು ಮತದಾರರು ತೀರ್ಮಾನ ಕೈಗೊಳ್ಳುತ್ತಾರೆ. ನಾನು ಪಕ್ಷದ ಹೈಕಮಾಂಡ್ ಮಾರ್ಗದರ್ಶನದಂತೆ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟನೆ ಮಾಡುತ್ತೇನೆ ಎಂದಿದ್ದಾರೆ.