ಸಕಲೇಶಪುರ ತಾಲೂಕು ರೆಸಾರ್ಟ್ ಹಾಗು ಹೋಂಸ್ಟೇ ಮಾಲೀಕರಿಂದ ಸಚಿವ ಗೋಪಾಲಯ್ಯ ನವರ ಭೇಟಿ.
ಹಲವು ಕುಂದುಕೊರತೆಗಳ ಬಗ್ಗೆ ಪ್ರಸ್ತಾಪ.
ಸಕಲೇಶಪುರ ಪ್ರವಾಸಿ ತಾಣವಾಗಿ ರೂಪುಗೊಂಡಿದ್ದು ಇಲ್ಲಿ 30 ಕ್ಕೂ ಹೆಚ್ಚು ರೆಸಾರ್ಟ್ ಗಳು, 150 ಕ್ಕೂ ಹೆಚ್ಚು ಹೋಂ ಸ್ಟೇಗಳಿದ್ದು, ಪ್ರತಿ ವಾರದ ಕೊನೆಯಲ್ಲಿ ವಿದೇಶ, ಬೆಂಗಳೂರು ಮತ್ತು ರಾಜ್ಯದ ವಿವಿದೆಡೆಯಿಂದ ಸಾವಿರಾರು ಪ್ರವಾಸಿಗರು ಬರುತ್ತಿದ್ದು ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿರುತ್ತೇವೆ. ಆದರೆ ನಮಗೆ ಸರ್ಕಾರಿ ಇಲಾಖೆಗಳಿಂದ, ಅಧಿಕಾರಿಗಳಿಂದ ಹಲವು ತೊಂದರೆಗಳು ಆಗುತ್ತಿದೆ.
ಈ ಕುರಿತು ಗಮನಹರಿಸಬೇಕೆಂದು, ಇರುವ ತೊಡಕುಗಳನ್ನು ನಿವಾರಣೆ ಮಾಡಿ ಇಲ್ಲಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅಧ್ಯತೆ ನೀಡಬೇಕಾಗಿ ಸಕಲೇಶಪುರ ರೆಸಾರ್ಟ್ ಮಾಲೀಕರ ಅಸೋಸಿಯೇಷನ್ ವತಿಯಿಂದ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಗೋಪಾಲಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್ ಎಮ್ ವಿಶ್ವನಾಥ್, ಬಿಜೆಪಿ ಮುಖಂಡ ನಾರ್ವೆ ಸೋಮಶೇಖರ್, ಮದನಪುರ ರಾಜೀವ್, ಮಸ್ತಾರೆ ಲೋಕೇಶ್ ಸೇರಿದಂತೆ ಇನ್ನಿತರರಿದ್ದರು