ಸಕಲೇಶಪುರ / ಮುಗಲಿ :ನ್ಯಾಯ ಕೊಡಿಸುವಂತೆ ವಕೀಲರ ಮನೆಗೆ ಮಧ್ಯರಾತ್ರಿ ಎಂಟ್ರಿಕೊಟ್ಟ ಒಂಟಿ ಸಲಗ.
ಸಕಲೇಶಪುರ : ಕಳೆದ ಒಂದು ವಾರದಿಂದ ಒಂಟಿ ಸಲಗವೊಂದು ಬೆಳಗೋಡು ಹೋಬಳಿಯ ಹೆಬ್ಬನಹಳ್ಳಿ, ಶಿಡಿಗಳಲೆ, ಮುಗಲಿ,ಲಕ್ಕುಂದ ಸೇರಿದಂತೆ ಇನ್ನಿತರ ಗ್ರಾಮಗಳ ಸುತ್ತಮುತ್ತ ಹಗಲು- ರಾತ್ರಿ ವೇಳೆಯಲ್ಲಿ ಸಂಚಾರ ಮಾಡುತ್ತಿದ್ದೆ.
ಕಳೆದ ರಾತ್ರಿ ವಕೀಲರಾದ ಮುಗಲಿ ಗ್ರಾಮದ ವಕೀಲರಾದ ಶ್ರೀಕಾಂತ್ ಅವರ ಮನೆಯ ಮುಂಭಾಗಕ್ಕೆ ತೆರಳಿ ಕೆಲ ನಿಮಿಷಗಳ ವರೆಗೂ ಅಲ್ಲೇ ನಿಂತು ನಂತರ ಕಾಡಿಗೆ ವಾಪಸ್ಸಾಗಿದೆ .
ವಕೀಲ ಶ್ರೀಕಾಂತ್ ರವರು ಕಾರ್ಯ ನಿಮಿತ್ತ ಹಾಸನಕ್ಕೆ ತೆರಳಿದ್ದರು ಮನೆಯಲ್ಲಿ ಅವರ ಪತ್ನಿ, ಮಕ್ಕಳಿದ್ದರು ಇದ್ದರು ಈ ವೇಳೆ ಎಂಟ್ರಿ ಕೊಟ್ಟ ಆನೆ ತನ್ನ ಸೊಂಡಿಲಿನಿಂದ ಬಾಗಿಲನ್ನು 2-3 ಬಾರಿ ಮುಟ್ಟಿ ನಂತರ ವಾಪಸ್ಸಾಗಿದೆ .ಹಾಸನಕ್ಕೆ ತೆರಳಿದ್ದ ವಕೀಲರು ಮನೆಗೆ ಬರುವಾಗ ಅವರ ಪತ್ನಿ ಕರೆ ಮಾಡಿ ಮನೆಗೆ ಬರಬೇಡಿ ಮನೆ ಮುಂದೆ ಕಾಡಾನೆ ಬಂದಿದೆ ಎಂದು ತಿಳಿಸಿದ್ದರಿಂದ ವಕೀಲರು ಮನೆಗೆ ತೆರಳದೆ ಬೆಳಗೋಡು ಗ್ರಾಮದಲ್ಲಿ ಕೆಲ ಸಮಯ ಉಳಿಯಬೇಕಾಯಿತು .
ಈ ಒಂಟಿ ಸಲಗಕ್ಕೆ ರೇಡಿಯೋ ಕಾಲರ್ ಅಳವಡಿಸಿ ರುವುದು ಕಂಡುಬಂದಿದೆ .
ವನ್ಯಜೀವಿಗಳಾದ ನಮಗೆ ಕಾಡಿನಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ ಜನರು ಈಗಾಗಲೇ ಸಾಕಷ್ಟು ಅರಣ್ಯವನ್ನು ನಾಶ ಮಾಡಿದ್ದಾರೆ .ಕಾಡಿನಲ್ಲಿ ನಮಗೆ ಆಹಾರವೂ ಸಿಗುತ್ತಿಲ್ಲ ಜೊತೆಗೆ ವಾಸಿಸುವುದಕ್ಕೂ ಆಗುತ್ತಿಲ್ಲ ನಮಗೆ ಸೂಕ್ತವಾದ ಜಾಗದಲ್ಲಿ ಜೀವಿಸಲು ಅವಕಾಶ ನೀಡುವಂತೆ ವಕೀಲರ ಮೂಲಕ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಬಂದಿರಬಹುದೇನೋ …?