…ಸಕಲೇಶಪುರ ತಾಲೂಕು ಹೆ ತ್ತೂರು ಹೋಬಳಿ ಬೆಳೆಗಾರರ ಸಂಘದ ವತಿಯಿಂದವನಗೂರು ಕೂಡ ರಸ್ತೆ
ವೃತ್ತ ಅರಣ್ಯ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಅರಣ್ಯ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಲು ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ.
ಕಾಫಿ ಗಿಡ ಕಳೆದುಕೊಂಡಿರುವ ರೈತನ ಜಮೀನಿಗೆ ಭೇಟಿ ನೀಡಿದ ಬೆಳಗಾರರ ಸಂಘದ ಪದಾಧಿಕಾರಿಗಳು ಭೇಟಿ ಹೋರಾಟ ನಡೆಸಿದ್ದಾರೆ.
ತಪ್ಪಿತಸ್ಥ ಅರಣ್ಯ ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು .
ಕಾಫಿ ತೋಟ ನಾಶ ಮಾಡಿರುವ ಅರಣ್ಯ ಸಿಬ್ಬಂದಿ ಸುನಿಲ್ ಹಾಗೂ ಗುತ್ತಿಗೆದಾರ ನೌಕರ ವಿನೋದ್ ಕೂಡಲೆ ಅರಣ್ಯ ಇಲಾಖೆ ಕೆಲಸದಿಂದ ಅಮಾನತು ಮಾಡಲು ಬೆಳೆಗಾರರ ಸಂಘ ಒತ್ತಾಯ ಬೆಳೆಗಾರರ ಪ್ರತಿಭಟನೆಗೆ ಕೈಜೋಡಿಸಿದ ಸ್ಥಳೀಯ ನೂರಾರು ರೈತರು ನಷ್ಟ ಅನುಭವಿಸಿರುವ ರೈತ ದೇವರಾಜ್ ಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ಮಾಡಲಾಯಿತು.
ಅರಣ್ಯ ಇಲಾಖೆ ದೌರ್ಜನ್ಯದ ವಿರುದ್ಧ ಒಗ್ಗಟ್ಟಲ್ಲಿ ಇರುವಂತೆ ಬೆಳಗಾರರ ಸಂಘ ರೈತರಿಗೆ ಮನವಿ ಮಾಡಿದೆ.
ಇದೇ ರೀತಿ ಅರಣ್ಯ ಇಲಾಖೆ ಮುಗ್ಧ ರೈತರ ಮೇಲೆ ದೌರ್ಜನ್ಯ ನಡೆಸಿದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬೆಳಗಾರರ ಸಂಘದ ವತಿಯಿಂದ ಎಲ್ಲಾ ರೈತರು ಕಾರ್ಯನಿರ್ವಹಿಸಲು ಸಜ್ಜಾಗಿದ್ದಾರೆ.
ಏನಿದು ಪ್ರಕರಣ ….
ತಾಲೂಕಿನ ಬ್ಯಾಗಡಿಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ದೇವರಾಜ್ ಎಂಬ ಬೆಳೆಗಾರನಿಗೆ ಯಾವುದೆ ನೋಟಿಸ್ ನೀಡದೆ ಕಳೆದ 8 ವರ್ಷಗಳಿಂದ ಅಪಾರ ಶ್ರಮಪಟ್ಟು ಬೆಳೆದಿದ್ದ ಕಟಾವಿಗೆ ಬಂದಿದ್ದ ಸುಮಾರು 200ಕ್ಕೂ ಹೆಚ್ಚು ಕಾಫಿ ಗಿಡಗಳನ್ನು ಯಾವುದೇ ನೋಟಿಸ್ ನೀಡದೆ ಏಕಾಏಕಿ ಕಡಿದು ಹಾಕಿದೆ. ಈ ಸಂಧರ್ಭದಲ್ಲಿ ತೋಟಕ್ಕೆ ಆಗಮಿಸಿದ ದೇವರಾಜ್ ರವರ ಆಕ್ರೋಷವನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳದಿಂದ ಹೋಗಿದ್ದಾರೆ.
ಈ ಹಿನ್ನೆಲೆಯಲ್ಲಿ ಗ್ರಾಮದ ಅಮಾಯಕ ರೈತ ದೇವರಾಜ್ ಮಾತನಾಡಿ ,ತಮ್ಮ ತಾತ ಮುತ್ತಾತ ಕಾಲದಿಂದಲೂ ಅನುಭವದಲ್ಲಿದ್ದಂತಹ ಜಮೀನನ್ನು ಅರಣ್ಯ ಇಲಾಖೆ ನಮ್ಮದೆಂದು ಹೇಳುತ್ತಿದ್ದು ಯಾವುದೇ ನೋಟಿಸ್ ನೀಡದೆ ಏಕಾಏಕಿ ದಾಳಿ ನಡೆಸಿ ಕಾಫಿ ಗಿಡಗಳನ್ನು ಕಡಿದು ಹಾಕಿದ್ದಾರೆ. ಇದು ಖಂಡನೀಯವಾಗಿದ್ದು ಮುಂದೇನು ಮಾಡಬೇಕೆಂಬುದು ನನಗೆ ತೋಚುತ್ತಿಲ್ಲ, ಬೆಳೆಗಾರರ ಸಂಘಕ್ಕೆ ದೂರು ನೀಡುವೆ ಎಂದಿದ್ದಾರೆ. ಕಾಪಿ ಗಿಡಗಳನ್ನು ಅರಣ್ಯ ಇಲಾಖೆ ಕಡಿದು ಹಾಕಿರುವುದು ದುರಂತವಾಗಿದ್ದು ಒಂದೆಡೆ ಸರ್ಕಾರಿ ಜಾಗದಲ್ಲಿ ಕೃಷಿ ಮಾಡಲು ಒತ್ತುವರಿ ಮಾಡಿದ್ದರೆ ಸಕ್ರಮ ಮಾಡಲಾಗುವುದು ಎಂದು ಸರ್ಕಾರ ಹೇಳುತ್ತಿದ್ದು ಮತ್ತೊಂದೆಡೆ ಅರಣ್ಯ ಭೂಮಿಯ ಹೆಸರಲ್ಲಿ ರೈತರಿಗೆ ಅರಣ್ಯ ಇಲಾಖೆ ಕಿರುಕುಳ ಕೊಡುವುದು ಎಷ್ಟು ಸರಿ ಎಂಬುದು ಪ್ರಶ್ನೆಯಾಗಿದೆ.