Breaking News ಸಕಲೇಶಪುರ :ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಅಗ್ರಹಿಸಿ ಕನ್ನಡಪರ ಸಂಘಟನೆಗಳಿಂದ ಹೈ ವೋಲ್ಟೇಜ್ ಮೀಟಿಂಗ್
ಸೋಮವಾರದಿಂದ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ.
ಸಕಲೇಶಪುರ : ಮಲೆನಾಡು ಭಾಗದ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಮುಖಮಂತ್ರಿ ಸಕಲೇಶಪುರಕ್ಕೆ ಭೇಟಿ ನೀಡುವ ವೇಳೆ ಪ್ರತಿಭಟನೆ ನಡೆಸಲು ಇಂದು ಕನ್ನಡಪರ ಸಂಘಟನೆಗಳು ಮುಖಂಡರು ಸಭೆ ಸೇರಿದ್ದಾರೆ.
ಇದುವರೆಗೂ ಆಡಳಿತ ನಡೆದ ಸರ್ಕಾರಗಳು ಬರಿ ಭರವಸೆಗಳನ್ನು ನೀಡಿ ನಮ್ಮನ್ನು ವಂಚಿಸಿವೆ ಇನ್ನು ಮುಂದೆ ಹಾಗೆ ಆಗುವುದಕ್ಕೆ ಅವಕಾಶ ನೀಡುವುದಿಲ್ಲ ನಮಗೆ ಪರಿಹಾರದ ಆದೇಶ ಬೇಕು ಎಂದು ಪಟ್ಟು ಹಿಡಿದಿರುವ ಸಂಘಟನೆಗಳು ಸೋಮವಾರದಿಂದ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿವೆ.