Monday, March 17, 2025
Homeಸುದ್ದಿಗಳುಸಕಲೇಶಪುರಸಿಮೆಂಟ್ ಮಂಜು ಮೊಸರಿನಲ್ಲಿ ಕಲ್ಲು ಹುಡುಕುವುದು ಬೇಡ: ಎಪಿಎಂಸಿ ಮಾಜಿ ಅಧ್ಯಕ್ಷ ರಂಜೇಶ್

ಸಿಮೆಂಟ್ ಮಂಜು ಮೊಸರಿನಲ್ಲಿ ಕಲ್ಲು ಹುಡುಕುವುದು ಬೇಡ: ಎಪಿಎಂಸಿ ಮಾಜಿ ಅಧ್ಯಕ್ಷ ರಂಜೇಶ್

ಸಕಲೇಶಪುರ : ಸಿಮೆಂಟ್ ಮಂಜು  ತಾಳ್ಮೆ ಸಹನೆಯನ್ನು ರೂಡಿಸಿಕೊಳ್ಳಬೇಕು ಎಪಿಎಂಸಿ ಮಾಜಿ ಅಧ್ಯಕ್ಷ ರಂಜೇಶ್ ಕಿವಿಮಾತು ಹೇಳಿದ್ದಾರೆ.
ಇಂದು ತಾಲೂಕಿನ ವಳಲಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹೊಸಹಳ್ಳಿ ಬೆಟ್ಟದಲ್ಲಿ ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆದ ಪ್ಯಾರಾ ಗ್ಲೈಡಿಂಗ್ ಚಾಲನೆ ಕಾರ್ಯಕ್ರಮ ಜೆಡಿಎಸ್ ಕಾರ್ಯಕ್ರಮವಾಗಿದೆ ಎಂಬ ಸಿಮೆಂಟ್ ಮಂಜು ಅವರ ಆರೋಪ ಸತ್ಯಕ್ಕೆ ದೂರವಾಗಿದೆ, ಇಂದು ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರೇಣುಕಾ ಅವರು ಖುದ್ದು ಪಾಲ್ಗೊಂಡಿದ್ದರು. ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಾಗಿದ್ದು ಜಿಲ್ಲಾಮಟ್ಟದ ಹಾಗೂ ತಾಲೂಕಿನ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.
ಎಚ್ ಕೆ ಕುಮಾರಸ್ವಾಮಿ ಅವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಅವರಿಗೆ ಸಣ್ಣತನದ ರಾಜಕೀಯ ಗೊತ್ತಿಲ್ಲ. ಆರೋಪ ಮಾಡುವ ಅವರು  ಇಂದು ನಡೆದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರಾದ ರೇಣುಕಾರವರು ಸಹ ಇದ್ದಾರೆ ,ಇವೆಲ್ಲವನ್ನು ನೋಡಿ ಅವರು  ಮಾತನಾಡಲಿ,  ರಾಜಕೀಯದಲ್ಲಿ ಬಾಲ್ಯವಸ್ಥೆಯಲ್ಲಿರುವ ಮಂಜು ತಾಳ್ಮೆ ಸಹನೆ ರೂಡಿಸಿಕೊಂಡರೆ ರಾಜಕೀಯದಲ್ಲಿ ಏಳಿಗೆಯಾಗುತ್ತಾರೆ ಎಂದು ಹೇಳಿದರು.
RELATED ARTICLES
- Advertisment -spot_img

Most Popular