ಕಳೆದ ನವೆಂಬರ್ 7ರಿಂದ ನಾಪತ್ತೆಯಾಗಿದ್ದ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಪೊಲೀಸ್ ರಾಣಾ ವ್ಯಾಪ್ತಿಯ ಅಣತಿ ಗ್ರಾಮದ 14 ವರ್ಷದ ಬಾಲಕಿಯನ್ನು ಹಾಸನ ಪೊಲೀಸರು ಶುಕ್ರವಾರ ತುಮಕೂರು ಜಿಲ್ಲೆಯಲ್ಲಿ ಪತ್ತೆ ಹಚ್ಚಿದ್ದಾರೆ.
ನಂದಿತಾ ಎಂಹ 7ನೇ ತರಗತಿಯ ವಿದ್ಯಾರ್ಥಿನಿ ನವೆಂಬರ್ 7 ರಂದು ನಾಪತ್ತೆಯಾಗಿದ್ದರು. ಮನೆಯಿಂದ ಹೊರಟ ನಂದಿತಾ ಹಾಸ್ಟೆಲ್‌ಗೆ ಹೋಗಿರಲಿಲ್ಲ. ಈ ಸಂಬಂಧ ಬಾಲಕಿಯ ಪೋಷಕರು ನವೆಂಬರ್ 8 ರಂದು ನುಗ್ಗೇಹಳ್ಳಿ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.
ಬಾಲಕಿಯನ್ನು ಪತ್ತೆ ಮಾಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹಾಸನ ಎಸ್ಪಿ ಹರಿರಾಮ್ ಶಂಕರ್ ಅವರಿಗೆ ಸೂಚಿಸಿದ್ದಾರೆ ಮತ್ತು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ನಾಪತ್ತೆ ಪ್ರಕರಣಗಳ ಬಗ್ಗೆ ಗೃಹ ಸಚಿವರು ತೀವ್ರ ಕಳವಳ ವ್ಯಕ್ತಪಡಿಸಿದ್ದರು.
ಹಾಸ್ಟೆಲ್‌ಗೆ ಹೋಗುವಾಗ ಆಕೆಯ ಸಂಬಂಧಿಯಾಗಿರುವ ಗಿರೀಶ್ ಎಂಬ ವ್ಯಕ್ತಿ ಆಮಿಷ ಒಡ್ಡಿ ಕರೆದುಕೊಂಡು ಹೋಗಿರಬಹುದು ಎಂದು ನಂದಿತಾ ತಂದೆ ಕುಮಾರ್ ಮತ್ತು ಗ್ರಾಮಸ್ಥರು ಶಂಕಿಸಿದ್ದಾರೆ.
ಈ ಸಂಬಂಧ ಗಿರೀಶ್ ಅವರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.