ಸಕಲೇಶಪುರ:ಅಬಕಾರಿ ಇಲಾಖೆಯವರು ಜಪ್ತುಪಡಿಸಿಕೊಂಡ ಅಕ್ರಮ ಮದ್ಯವನ್ನು ಪಟ್ಟಣದ ಅಬಕಾರಿ ಇಲಾಖೆ ಸಮೀಪ ನಾಶಪಡಿಸಲಾಯಿತು.
ಮೇ 2021 ರಿಂದ 20 ತಿಂಗಳ ಅವಧಿಯಲ್ಲಿ 172.440 ಲೀಟರ್ ಮದ್ಯ,39.790 ಲೀಟರ್ ಬಿಯರ್,35.700 ಲೀಟರ್ ಕಳ್ಳಬಟ್ಟಿ,556 ಬೆಲ್ಲ ಕೊಳೆ ಹಾಗೂ 4.5 ಲೀಟರ್ ಸೆಂದಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಒಟ್ಟು 1.3345 ಲಕ್ಷ ರೂ ಮೊತ್ತದ ಮದ್ಯವನ್ನು ನಾಶ ಮಾಡಲಾಯಿತು.
ಕಳೆದ ಬಾರಿ ವಶಪಡಿಸಿಕೊಂಡ ಮದ್ಯಕ್ಕಿಂತಲೂ ಈ ಬಾರಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಸಕಲೇಶಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ರಾಜೇಶ್ ನಾಯ್ದು,ಅಬಕಾರಿ ನಿರೀಕ್ಷೆಕರಾದ ವೆಂಕಟೇಶ್, ಕಂದಾಯ ಇಲಾಖೆಯ ಅಧಿಕಾರಿಗಳಾದ, ಉದಯ್, ರಾಕೇಶ್ ಹಾಗೂ ಕೆ. ಎಚ್. ಬಿ. ಸಿ. ಎಲ್ ನ ಸುಧೀಂದ್ರ ಕುಮಾರ್ ಇದ್ದರು