ಸಕಲೇಶಪುರ: ಪಟ್ಟಣದ ಕುಡುಗರಹಳ್ಳಿ ಬಡಾವಣೆಯ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತೀಕ ಮಹೋತ್ಸವ ಬುಧವಾರ ರಾತ್ರಿ ಅದ್ದೂರಿಯಾಗಿ ನಡೆಯಿತು. ಬಸವೇಶ್ವರ ದೇವರಿಗೆ ವಿಶೇಷ ಪೂಜೆ ವಿಧಿ ವಿಧಾನಗಳು ನಡೆಯಿತು.ದೇವರಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ದೇವಸ್ಥಾನವನ್ನು ವಿಶೇಷ ದೀಪಲಂಕಾರ ಮಾಡಲಾಗಿತ್ತು. ವಾದ್ಯ ವೃಂದಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಪಿರಿ ಪಿರಿ ಕಳೆಯ ಅಡಚಣೆ ನಡುವೆ ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನ ಸಂತಪರ್ಣೆ ಮಾಡಲಾಯಿತು.
ತಾಜಾ ಸುದ್ದಿ