Tuesday, March 25, 2025
Homeಸುದ್ದಿಗಳುಸಕಲೇಶಪುರತಾಲೂಕಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ

ತಾಲೂಕಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ

 

ಸಕಲೇಶಪುರ: ತಾಲೂಕಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ರವರಿಗೆ ಮನವಿ ಸಲ್ಲಿಸಲಾಯಿತು.
ಅಂಗನವಾಡಿ ಇಲಾಖೆ ಮೂಲಕ ಶಿಶುಗಳಿಗೆ, ಗರ್ಭಿಣಿ, ಹಾಗೂ ಬಾಣಂತಿ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ದೊರಕಬೇಕಾದ ಆಹಾರ ಪದಾರ್ಥಗಳು ಮೊಟ್ಟೆ, ಇತರ ಸೌಲಭ್ಯಗಳು ಅಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ‌. ಕಳೆದ 18ರಿಂದ 20 ವರ್ಷಗಳಿಂದ ತಾಲೂಕು ಅಂಗನವಾಡಿ ಕೇಂದ್ರ ಕಚೇರಿಯಲ್ಲಿ ಆಯಕಟ್ಟಿನ ಕುರ್ಚಿಯಲ್ಲಿ ಕುಳಿತುಕೊಂಡು ರಾಜಕೀಯ ಪ್ರಭಾವ ಬಳಸಿ ಐದಾರು ಜನರ ಅಧಿಕಾರಿಗಳ ಗುಂಪು ಇಲಾಖೆಗೆ ಸುಳ್ಳು, ಮಾಹಿತಿಯನ್ನು ನೀಡಿ ಫಲಾನುಭವಿಗಳಿಗೆ ಫಲಾನುಭವಿಗಳಿಗೆ ಅಕ್ರಮ ವ್ಯಸಗುತ್ತಿರುವುದಾಗಿ ಸಾರ್ವಜನಿಕವಾಗಿ ದೂರುಗಳಿವೆ. ಈ ನಿಟ್ಟಿನಲ್ಲಿ ಅಂಗನವಾಡಿ ಇಲಾಖೆಯ ಸಂಬಂಧ ಪಟ್ಟ ಎಲ್ಲಾ ಆಯಾಮಗಳಲ್ಲೂ 2004 ರಿಂದ 2022ರ ವರೆಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿ ತಾಲೂಕು ಕಾಂಗ್ರೆಸ್ ಪಕ್ಷ ಸಾರ್ವಜನಿಕರ ಪರವಾಗಿ ಒತ್ತಾಯ ಮಾಡುತ್ತದೆ.

೨). ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಕಲೇಶಪುರ, ಈ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಗರಿಷ್ಠ ಏಳು ದಿನಗಳಲ್ಲಿ ಆಗಬೇಕಾದ ಕೆಲಸಗಳು ತಿಂಗಳು ಕಳೆದರೂ ಸೌಲಭ್ಯ ಸಿಗುವುದಿಲ್ಲ.ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದಾಗ ಎಫ್ ಡಿ ಸಿ, ಎಸ್ ಡಿ ಸಿ, ಮತ್ತು ಡಿ ಗ್ರೂಪ್ ನೌಕರರು ಒಟ್ಟು ಎಂಟು ಜನ ಅಗತ್ಯತೆ ಇದ್ದು ಸದ್ಯಕ್ಕೆ ಎರಡು ಜನ ಮಾತ್ರ ಸೇವೆಯಲ್ಲಿದ್ದಾರೆ.ಆದುದರಿಂದ ಇನ್ನುಳಿದ ಆರು ಜನ ಎಫ್ ಡಿ ಸಿ ಎಸ್ ಡಿ ಸಿ ಮತ್ತು ಡಿ ಗ್ರೂಪ್ ನೌಕರರನ್ನು ಈ ಕಚೇರಿಗೆ ಹಾಕಿಸಿ ಕೊಡುವಂತೆ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡುವಂತೆ ಸಾರ್ವಜನಿಕರ ಪರವಾಗಿ ಕಾಂಗ್ರೆಸ್‌ ಪಕ್ಷ ಈ ಮೂಲಕ ಮನವಿ ಮಾಡುತ್ತೇವೆ.

೩) ಕಾಡು ಆನೆಗಳು ಮತ್ತು ಕಾಡುಪ್ರಾಣಿಗಳ ಹಾವಳಿಗೆ ಇದುವರೆಗೆ ತಾಲೂಕಿನಲ್ಲಿ 79 ಜನ ಬಲಿಯಾಗಿದ್ದು ಸಾವಿರಾರು ಎಕರೆ ಬೆಳೆ ನಷ್ಟ ಮತ್ತು ಜೀವ ನಷ್ಟ ಅನುಭವಿಸುತ್ತಿದ್ದಾರೆ.

ಇದಕ್ಕೊಂದು ಶಾಶ್ವತ ಪರಿಹಾರಕ್ಕಾಗಿ ಕಾಡು ಆನೆಗಳನ್ನು ಸ್ಥಳಾಂತರಿಸಿ ಮುಂಜಾಗ್ರತ ಕ್ರಮವಾಗಿ ಆನೆ ಬ್ಯಾರಿಕೇಡ್‌ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಬೇಕಾಗಿ ಸಾರ್ವಜನಿಕರ ಪರವಾಗಿ ಕಾಂಗ್ರೆಸ್ ಪಕ್ಷ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.

೪) ರಾಷ್ಟ್ರೀಯ ಹೆದ್ದಾರಿ ರಾಜ್ಯ ಹದ್ದಾರಿ ಜಿಲ್ಲಾ ರಸ್ತೆಗಳು ಮತ್ತು ಗ್ರಾಮದ ಸಂಪರ್ಕ ರಸ್ತೆಗಳು ತೀರಾ ಹದಗೆಟ್ಟಿದ್ದು ರೈತರು ವಿದ್ಯಾರ್ಥಿಗಳು ಕೂಲಿ ಕಾರ್ಮಿಕರು ಸೇರಿದಂತೆ ಸಾರ್ವಜನಿಕರ ಹೋರಾಟಕ್ಕೆ ದಿನನಿತ್ಯ ಮೃತ್ಯು ಕೋಪವಾಗಿರುವ ರಸ್ತೆಗಳ ಗುಂಡಿಗಳನ್ನು ತಕ್ಷಣ ಮುಚ್ಚಿ ರಸ್ತೆ ಓಡಾಟಕ್ಕೆ ಅನುಕೂಲವಾಗುವಂತೆ ಸಂಬಂಧಪಟ್ಟವರಿಗೆ ಗಮನಕ್ಕೆ ತಂದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಕಾಂಗ್ರೆಸ್ ಪಕ್ಷ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.

೫) ನಗರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯ ಜನ ಔಷಧಿ ಕೇಂದ್ರದಲ್ಲಿ ಕೆಲವೊಂದು ಔಷಧಿಗಳು ಮಾತ್ರ ಲಭ್ಯವಿದ್ದು ಇನ್ನಿತರ ಔಷಧಿ ಗಳು ಲಭ್ಯವಿರುವುದಿಲ್ಲ ಮತ್ತು ಶುಚಿತ್ವದ ಬಗ್ಗೆ, ಹಾಗೂ ಇನ್ನಿತರ ಅಸೌಕರ್ಯಗಳ ಬಗ್ಗೆ, ತಾವು ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಡಜನರಿಗೆ ನ್ಯಾಯಯುತವಾದ ಸೌಲಭ್ಯ ಕಲ್ಪಿಸಿ ಕೊಡುವಂತೆ ಕಾಂಗ್ರೆಸ್ ಪಕ್ಷ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.

೬) ಸಕಲೇಶಪುರ ಪುರಸಭೆಯಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಇದ್ದು, ರಸ್ತೆಗಳು ಒಳಚರಂಡಿಗಳು ಮತ್ತು ಯುಜಿಡಿ ಸೌಲಭ್ಯ ಅಸಮರ್ಪಕವಾಗಿದ್ದು ಸಾರ್ವಜನಿಕರಿಂದ ಹಲವಾರು ದೂರುಗಳಿರುತ್ತವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಕಾಂಗ್ರೆಸ್ ಪಕ್ಷ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಾಸ್ಕರ್, ಕೆಪಿಸಿಸಿ ಸದಸ್ಯರಾದ ಕೊಲ್ಲಹಳ್ಳಿ ಸಲೀಂ,ಪುರಸಭಾ ಸದಸ್ಯರಾದ ಅನ್ನಪೂರ್ಣ, ಅಣ್ಣಪ್ಪ, ಕಾಂಗ್ರೆಸ್ ಮುಖಂಡರುಗಳಾದ ವೆಂಕಟೇಶ್, ಧರ್ಮ ಹಾಜರಿದ್ದರು.

RELATED ARTICLES
- Advertisment -spot_img

Most Popular