ನ.19 ರಂದು ವಿದ್ಯುತ್ ಅದಾಲತ್.
ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ವಿದ್ಯುತ್ ಅದಾಲತ್
ಹಾಸನ : ಸಕಲೇಶಪುರ ಕಾರ್ಯ ಮತ್ತು ಪಾಲನಾ ಉಪ-
ವಿಭಾಗ ಯೆಸಳೂರು ಶಾಖಾ ವ್ಯಾಪ್ತಿಯ ಹೊಸೂರು
ಗ್ರಾಮಪಂಚಾಯಿತಿ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು-
ಕೊರತೆಗಳನ್ನು ಪರಿಹರಿಸುವ ಸಲುವಾಗಿ ನ.19 ರಂದು ಬೆಳಗ್ಗೆ
11 ರಿಂದ ಮಧ್ಯಾಹ್ನ 01 ರವರೆಗೆ ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮವನ್ನು ಮುಖ್ಯ ಇಂಜಿನಿಯರ್(ವಿ), ಕಾರ್ಯ ಮತ್ತು ಪಾಲನಾ ವಲಯ, ಚಾವಿಸನಿನಿ., ಹಾಸನ ರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದು, ಹೊಸೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ವಿದ್ಯುತ್ ಗ್ರಾಹಕರು ವಿದ್ಯುತ್ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕುಂದು-ಕೊರತೆಗಳನ್ನು ಪರಿಹರಿಸಿಕೊಳ್ಳುವಂತೆ ಕಾ,ಮತ್ತು ಪಾ, ಉಪ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.