ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆ ಸಮೀಪದ ಹೊಸಗದ್ದೆ ಸರ್ವೆ ನಂಬರ್ 6 ರ ರಾಮಚಂದ್ರ ಎಂಬುವರ ಮನೆ ಆವರಣದಲ್ಲಿ ಸಂಗ್ರಹ ಮಾಡಲಾಗಿದ್ದ ಹುಲ್ಲಿನ ಬಣವೆಗೆ ಅಕಸ್ಮಿಕವಾಗಿ ಬೆಂಕಿ ಬಿದ್ಧಿದೆ.ತಕ್ಷಣ ಮನೆಯವರು ಬೆಂಕಿ ನಂದಿಸಲು ಯತ್ನಿಸಿದರು ಯಾವುದೇ ಪ್ರಯೋಜನವಾಗದೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸಕಲೇಶಪುರದಿಂದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ 2ಟ್ಯಾಂಕರ್ ಗಳಷ್ಟು ನೀರು ಹಾರಿಸಿದರು ಬೆಂಕಿ ನಂದದ ಹಿನ್ನೆಲೆಯಲ್ಲಿ 3 ನೇ ಬಾರಿಗೆ ಸಮೀಪದ ಕೆರೆಯಿಂದ ನೀರು ತುಂಬಿ ಬೆಂಕಿ ನಂದಿಸಲಾಗುತ್ತಿದೆ.
ಕಳೆದ 2 ದಿನಗಳ ಹಿಂದಷ್ಟೇ ಗೋವುಗಳಿಗೆ ಹುಲ್ಲು ಸಾಕಾಗುವುದಿಲ್ಲ ಎಂದು ಹೆಗ್ಗದ್ದೆಯಿಂದ ಹುಲ್ಲು ತಂದಿದ್ದ ಹುಲ್ಲು ಬೆಂಕಿಗೆ ಆಹುತಿಯಾಗಿರುವುದರಿಂದ ರೈತನಿಗೆ ಅಪಾರ ನಷ್ಟವುಂಟಾಗಿದ್ದು ಇವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮದ ಲಿಂಗರಾಜು ಆಗ್ರಹಿಸಿದ್ದಾರೆ.