ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾಡಾನೆಗಳು ತಿರುಗಾಡುವುದು ಸರ್ವೇಸಾಮಾನ್ಯವಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುಗಾಡುವ ಸವಾರರಿಗೆ ಉಚಿತವಾಗಿ ಕಾಡಾನೆಗಳ ದರ್ಶನವಾಗುತ್ತಿದೆ.
ಸಕಲೇಶಪುರ ಭಾಗದಲ್ಲಿರುವ 80ಕ್ಕೂ ಹೆಚ್ಚು ಕಾಡಾನೆಗಳ ಪೈಕಿ ಬಲಿಷ್ಠವಾದ ದೈತ್ಯವಾದ ಕಾಡಾನೆ ಎಂದರೆ ಭೀಮ. ಹೆದ್ದಾರಿಯ ರಸ್ತೆಗಳಲ್ಲಿ, ವಸತಿ ಪ್ರದೇಶಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನಿರ್ಭೀತಿಯಿಂದ ತನ್ನಷ್ಟಕ್ಕೆ ತಾನು ಸಂಚರಿಸುತ್ತಿರುತ್ತದೆ. ಇಂದು ಬೆಳಗ್ಗೆ ಕೂಡ ರಾಷ್ಟ್ರೀಯ ಹೆದ್ದಾರಿ 75 ರ ಕಾಫಿ ಬೋರ್ಡ್ ಸಮೀಪ ಸನ್ ವಾಲೆ ಎಸ್ಟೇಟ್ ಬಳಿ ಸುಮಾರು ಒಂದು ಕಿ.ಮೀ ಹೆದ್ದಾರಿ ಬದಿಯಲಿ ನಡೆದುಕೊಂಡು ಹೋಗಿ ವಾಹನ ಸವಾರರಿಗೆ ಪುಕ್ಕಟೆಯಾಗಿ ಪ್ರದರ್ಶನ ನೀಡಿತು.