Tuesday, March 25, 2025
Homeಸುದ್ದಿಗಳುಡೆತ್​ನೋಟ್​ ಬರೆದಿಟ್ಟು ಗುಂಡು ಹಾರಿಸಿಕೊಂಡ ಮಹಿಳಾ ಪಿಎಸ್​ಐ! ಸ್ಥಿತಿ ಗಂಭೀರ

ಡೆತ್​ನೋಟ್​ ಬರೆದಿಟ್ಟು ಗುಂಡು ಹಾರಿಸಿಕೊಂಡ ಮಹಿಳಾ ಪಿಎಸ್​ಐ! ಸ್ಥಿತಿ ಗಂಭೀರ

 

ಕರ್ತವ್ಯನಿರತ ಮಹಿಳಾ ಪಿಎಸ್​ಐ ಒಬ್ಬರು ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.

ಜ್ಯೋತಿ ಬಾಯಿ (36) ಆತ್ಮಹತ್ಯೆಗೆ ಯತ್ನಿಸಿದವರು. ಪಣಂಬೂರು ನವಮಂಗಳೂರು ಬಂದರು ಪ್ರಾಧಿಕಾರದ ಮೊದಲ ಗೇಟ್​ನಲ್ಲಿ ಕರ್ತವ್ಯನಿರತ ಸಿಐಎಸ್​ಎಪ್​ನ ಪಿಎಸ್​ಐ ಜ್ಯೋತಿ, ಡೆತ್​ನೋಟ್​ ಬರೆದಿಟ್ಟು ಗುಂಡು ಹಾರಿಸಿಕೊಂಡಿದ್ದಾರೆ ಗುಂಡೇಟಿನಿಂದ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಜ್ಯೋತಿಬಾಯಿ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಪಣಂಬೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜ್ಯೋತಿ ಅವರ ಪತಿ ಓಂಬೀರ್ ಸಿಂಗ್ ಅವರು ಎಂಆರ್​ಪಿಎಲ್​ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿದ್ದಾರೆ. ಇವರು ರಾಜಸ್ಥಾನ ಮೂಲದವರು.

RELATED ARTICLES
- Advertisment -spot_img

Most Popular