Friday, March 21, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ಪಟ್ಬಣದ ಬಸವನಹಳ್ಳಿ ಬಡಾವಣೆಯ ಪ್ರಶಾಂತ್ ಹೃದಯಘಾತದಿಂದ ನಿಧನ

ಸಕಲೇಶಪುರ ಪಟ್ಬಣದ ಬಸವನಹಳ್ಳಿ ಬಡಾವಣೆಯ ಪ್ರಶಾಂತ್ ಹೃದಯಘಾತದಿಂದ ನಿಧನ

ಸಕಲೇಶಪುರ: ಪಟ್ಟಣದ ಬಸವನಹಳ್ಳಿ ನಿವಾಸಿ ಪ್ರಶಾಂತ್ (47) ತನ್ನ ಮನೆಯಲ್ಲೇ ಹೃದಯಘಾತದಿಂದ ನಿಧನರಾಗಿದ್ದಾರೆ. ಸೋಮವಾರ ರಾತ್ರಿ ಬಸವನಹಳ್ಳಿ ಗ್ರಾಮದ ಬಸವಣ್ಣ ದೇವರಿಗೆ ನಡೆದ ಕಾರ್ತಿಕ ಮಹೋತ್ಸವದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು. ಮಂಗಳವಾರ ಸಂಜೆ ಬಸವಣ್ಣ ದೇವಸ್ಥಾನದ ಎದುರಿಗಿರುವ ಚೌಡೇಶ್ವರಿ ದೇವರಿಗೆ ಪೂಜೆ ಸಲ್ಲಿಸಿ ಮನೆಗೆ ಹೋದಾಗ ಹೃದಯಾಘಾತವಾಗಿದ್ದು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಮೃತರು ತಮ್ಮ ಪತ್ನಿ, ಇಬ್ಬರು ಮಕ್ಕಳು ಅಪಾರ ಬಂಧು ಬಳಗ ಹಾಗೂ ಸ್ನೇಹಿತರನ್ನು ಆಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಬುಧವಾರ ನಡೆಯಲಿದೆ.

RELATED ARTICLES
- Advertisment -spot_img

Most Popular