ಸಕಲೇಶಪುರ: ತಾಲೂಕಿನ ವಡೂರು ಗ್ರಾಮದ ಮೋಹನ್ (40) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಬುಧವಾರ ಸಂಜೆ ಗ್ರಾಮದಲ್ಲಿರುವ ತನ್ನ ಮನೆಯಿಂದ ಪಡಿತರ ತರಲು ನ್ಯಾಯಬೆಲೆ ಅಂಗಡಿಗೆ ಹೋಗಿ ಹಿಂತಿರುಗಿ ಮನೆಗೆ ಬರುವಾಗ ಚಾಲನೆ ಮಾಡುತ್ತಿದ್ದ ಬೈಕ್ ರಸ್ತೆ ಬದಿಯ ಸೋಲಾರ್ ತಂತಿ ಬೇಲಿಯ ಕಂಬಕ್ಕೆ ಡಿಕ್ಕಿಯಾಗಿದೆ. ಈ ಸಂಧರ್ಭದಲ್ಲಿ ತೀವ್ರ ಪೆಟ್ಟು ತಿಂದು ಸ್ಥಳದಲ್ಲೆ ಮೋಹನ್ ಮೃತಪಟ್ಟಿದ್ದಾರೆ. ರಾತ್ರಿ ಮನೆಗೆ ಹಿಂತಿರುಗದ ಮೋಹನ್ ರವರನ್ನು ಎಲ್ಲೆಡೆ ಹುಡುಕಿದರು ಪತ್ತೆಯಾಗಿರಲಿಲ್ಲ. ಗುರುವಾರ ಮುಂಜಾನೆ ವ್ಯಕ್ತಿಯೋರ್ವರು ನಡೆದುಕೊಂಡು ಹೋಗುವಾಗ ಮೋಹನ್ ದ್ಚಿಚಕ್ರವಾಹನ ಹಾಗೂ ಶವ ಪತ್ತೆಯಾಗಿದೆ.ಮೃತ ವ್ಯಕ್ತಿ ತಾಲೂಕಿನ ದೇವಾಲದಕೆರೆ ಪಿಡಿಓ ರಾಮಚಂದ್ರು ರವರ ಸಹೋದರನಾಗಿದ್ದಾನೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.