Monday, March 17, 2025
Homeಸುದ್ದಿಗಳುಸಕಲೇಶಪುರಚಂಗಡಿಹಳ್ಳಿ ಪ್ರಕರಣ:ಜೆಡಿಎಸ್ ಕಾರ್ಯಕರ್ತರಿಂದ ಪ್ರತಿದೂರು

ಚಂಗಡಿಹಳ್ಳಿ ಪ್ರಕರಣ:ಜೆಡಿಎಸ್ ಕಾರ್ಯಕರ್ತರಿಂದ ಪ್ರತಿದೂರು

ಯಸಳೂರು / ಚಂಗಡಹಳ್ಳಿ: ಅಣ್ಣನ ಮೇಲೆ ಹಲ್ಲೆಗೈದವರನ್ನು ಬಂಧಿಸುವಂತೆ ನಾರೂರು ಗ್ರಾಮದ ರತನ್ ದೂರು
ನೆನ್ನೆ ಜೆಡಿಎಸ್ – ಬಿಜೆಪಿ ಕಾರ್ಯಕರ್ತರ ನಡುವೆ ನೆಡೆದಿದ್ದ ಗಲಾಟೆ

 

ಸಕಲೇಶಪುರ : ಗುರುವಾರ ತಾಲೂಕಿನ ಯಸಳೂರು ಹೋಬಳಿಯ ಚಂಗಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೆಡಿಎಸ್ – ಬಿಜೆಪಿ ಕಾರ್ಯಕರ್ತರ ನಡುವೆ ನೆಡೆದಿದ್ದ ಗಲಾಟೆ ಪ್ರಕರಣ ಹಿನ್ನಲೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ರಸಿಕ ರವರ ಸಹೋದರ ರತನ್ ರವರು ನನ್ನ ಅಣ್ಣನ ಮೇಲೆ ಹಲ್ಲೆ ಹಾಗೂ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ಶುಕ್ರವಾರ ಯಸಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಕುಮಾರಸ್ವಾಮಿ, ಅಧ್ಯಕ್ಷರಾದ ಸುಧಾ ರವರ ಪತಿ ನವೀನ್, ಬೆಕ್ಕನಹಳ್ಳಿ ಸವಿನ್ ಹಾಗೂ ಲೋಕೇಶ್ ಸೇರಿದಂತೆ 5 ಜನರು ನಮ್ಮ ಅಂಗಡಿಯ ಮುಂದೆ ಸುಮ್ಮನೆ ಕುಳಿತ್ತಿದ್ದ ನಮ್ಮ ಅಣ್ಣ ರಸಿಕನ ಮೇಲೆ ಕೆಟ್ಟ ಪದಗಳಿಂದ ನಿಂದಿಸಿ, ಶರ್ಟ್ ಹಿಡಿದುಕೊಂಡು ಎಳೆದಾಡಿ ಹಲ್ಲೆ ನೆಡೆಸಿದ್ದಾರೆ ಎಂದು ಆರೋಪಿಸಿ ದ್ದಾರೆ.

RELATED ARTICLES
- Advertisment -spot_img

Most Popular