Monday, March 24, 2025
Homeಸುದ್ದಿಗಳುಸಕಲೇಶಪುರಅಕ್ರಮ ಗೋಮಾಂಸ ಮಾರಾಟ ಇಬ್ಬರ ವಶ

ಅಕ್ರಮ ಗೋಮಾಂಸ ಮಾರಾಟ ಇಬ್ಬರ ವಶ

ಸಕಲೇಶಪುರ:ತಾಲೂಕಿನ ಬೆಳಗೋಡು ಗ್ರಾಮದ ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಗ್ರಾಮಾಂತರ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಗ್ರಾಮದ ಅನೀಸ್ ರೆಹಮಾನ್, ಅಸ್ಸಾಂ ಮೂಲದ ಒಸೋಮೊದ್ದೀನ್ ಎಂಬುವರನ್ನು ಬಂಧಿಸಿದ್ದಾರೆ. ಈ ಇಬ್ಬರು ಆಟೋದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಪಿಎಸ್‌ಐ ಖತೀಜ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಬೆಳಗೋಡು ಬಸ್ ನಿಲ್ದಾಣದ ಮುಂಭಾಗದ ರಸ್ತೆಯ ಪುಟ್ ಪಾತ್‌ನಲ್ಲಿ ಆಟೋ ನಿಲ್ಲಿಸಿಕೊಂಡು ಕೈಯಲ್ಲಿ 3 ಗೋಮಾಂಸದ ಕವರ್ ಇಟ್ಟುಕೊಂಡು ಮಾರಾಟ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.ಕಳೆದ ಎರಡು ದಿನಗಳ ಹಿಂದಷ್ಟೆ ಗುಲಗಳಲೆ ಗ್ರಾಮದ ಕಾಫಿ ತೋಟವೊಂದರಲ್ಲಿ ಅಕ್ರಮ ಗೋ ಮಾಂಸದ ಖಾದ್ಯಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಅಸ್ಸಾಂ ಮೂಲದವರನ್ನು ಪೋಲಿಸರು ಬಂಧಿಸಿದ್ದರು.ರಾಜ್ಯದಲ್ಲಿ ಗೋ ಮಾಂಸ ಮಾರಾಟ ನಿಷೇದವಿದ್ದರು ಸಹ ಆರೋಪಿಗಳ ವಿರುದ್ದ ಪೋಲಿಸರು ಕಠಿಣ ಕ್ರಮ ಕೈಗೊಳ್ಳದ ಕಾರಣ ತಾಲೂಕಿನಲ್ಲಿ ಎಗ್ಗಿಲ್ಲದೆ ಗೋಮಾಂಸ ಮಾರಾಟ ನಡೆಯುತ್ತಿದೆ. ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಅಸ್ಸಾಂ ಹಾಗೂ ಇತರ ರಾಜ್ತದವರನ್ನು ಮುಂದಿಟ್ಟುಕೊಂಡು ಗೋಮಾಂಸ ಮಾರಾಟ ಮಾಡುತ್ತಿರುವುದು ಪೋಲಿಸರಿಗೆ ತಲೆನೋವಾಗಿದೆ.

RELATED ARTICLES
- Advertisment -spot_img

Most Popular