ಸಕಲೇಶಪುರ: ಪಟ್ಟಣದ ಆರ್ಯ ವೈಶ್ಯ ಸಮಾಜದ ಮುಖಂಡ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಸೇವಕ ಐ.ಜಿ ರಾಜು (65)ಹೃದಯಾಘಾತದಿಂದ ನಿಧನರಾಗಿದ್ದಾರೆ.ಪ್ರವಾಸಕ್ಕೆ ತೆರಳಿದ್ದ ಅವರು ಸಕಲೇಶಪುರದಿಂದ ಹಾಸನಕ್ಕೆ ಬಸ್ಸಿನಲ್ಲಿ ಪ್ರಯಾಣಿಸಿ ಹಾಸನದಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುವ ಸಂಧರ್ಭದಲ್ಲಿ ಹೃದಯಘಾತಕ್ಕೆ ತುತ್ತಾಗಿದ್ದಾರೆ.ತಕ್ಷಣ ಅಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿದರು ಪ್ರಯೋಜನ ವಾಗದೆ ಮೃತ ಪಟ್ಟಿದ್ದಾರೆ. ಸಕಲೇಶಪುರ ಪಟ್ಟಣದಲ್ಲಿ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯ ವಾಗಿ ಸಮಾಜಮುಖಿ ಕೆಲಸ ಮಾಡುತ್ತಾ ಬಂದಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಆರ್ಯವೈಶ್ಯ ಪದ್ದತಿಯಂತೆ ಪಟ್ಡಣದ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ
ತಾಜಾ ಸುದ್ದಿ