ಸಕಲೇಶಪುರ: ಪಟ್ಟಣದ ದಯಾಳು ಮಾತೆ ದೇವಾಲಯದಲ್ಲಿ ಭಾನುವಾರ ಸಂಭ್ರಮದಿಂದ ಕ್ರಿಸ್ ಮಸ್ ಹಬ್ಬದ ಆಚರಣೆ ನಡೆಯಿತು. ಕ್ರಿಸ್ ಮಸ್ ಹಬ್ಬದ ಅಂಗವಾಗಿ ಚರ್ಚ್ ಗಳನ್ನು ವಿದ್ಯುತ್ ದೀಪಾಲಂಕರದಿಂದ ಬೆಳಗಲಾಗಿತ್ತು.
ಶಾಸಕ ಎಚ್.ಕೆ ಕುಮಾರಸ್ವಾಮಿ ಹಾಗೂ ಅವರ ಧರ್ಮ ಪತ್ನಿ ಮಾಜಿ ಜಿ.ಪಂ ಸದಸ್ಯೆ ಚಂಚಲಾ ಕುಮಾರಸ್ವಾಮಿ ಚರ್ಚ್ ಗೆ ಭೇಟಿ ನೀಡಿ ಯೇಸುವಿನ ಕೃಪೆಗೆ ಪಾತ್ರರಾದರು.