Monday, April 21, 2025
Homeಸುದ್ದಿಗಳುಸಕಲೇಶಪುರIಸಕಲೇಶಪುರ : ಸಮರ್ಪಕ ಬಸ್‌ ಸೌಲಭ್ಯದ ಕಲ್ಪಿಸುವಂತೆ NSUI ನಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ 

Iಸಕಲೇಶಪುರ : ಸಮರ್ಪಕ ಬಸ್‌ ಸೌಲಭ್ಯದ ಕಲ್ಪಿಸುವಂತೆ NSUI ನಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ 

 

 

Iಸಕಲೇಶಪುರ : ಸಮರ್ಪಕ ಬಸ್‌ ಸೌಲಭ್ಯದ ಕಲ್ಪಿಸುವಂತೆ NSUI ನಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ

ಸಕಲೇಶಪುರದಿಂದ ಹಾಸನಕ್ಕೆ ವಿದ್ಯಾಭ್ಯಾಸಕ್ಕಾಗಿ ಶಾಲಾ ಕಾಲೇಜುಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ,ಸಮಯಕ್ಕೆ ಸರಿಯಾಗಿ ಬಸ್‌ಗಳು ಸಿಗದೇ ತೊಂದರೆ ಉಂಟಾಗುತ್ತಿದೆ ಎಂದು NSUI ಜಿಲ್ಲಾಧ್ಯಕ್ಷ ಸುಪ್ರೀತ್ ಗೌಡ ಹೇಳಿದರು

ಬುಧುವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು,

ತಾಲೂಕಿನಲ್ಲಿ ಬಸ್ಸುಗಳ ಸಂಖ್ಯೆಯೂ ಕಡಿಮೆಯಿದ್ದು, ಇರುವ ಬಸ್ಸುಗಳು ಬಾಗೆ, ಬಾಳುಪೇಟೆ,ಪಾಳ್ಯ ಮುಂತಾದ ಕಡೆ ಬಸ್ಸುಗಳನ್ನು ನಿಲ್ಲಿಸದೇ,ಕೆಲವು ಬಸ್ಸುಗಳು ಬೈಪಾಸ್ ಮೂಲಕ ಸಂಚರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಅನಾನುಕೂಲ ಉಂಟಾಗುತ್ತಿದೆ.ಹಾಗೆಯೇ ಸಕಲೇಶಪುರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆನೆಗಳ ಹಾವಳಿ ಇರುವುದರಿಂದ ಅಂತಹ ಸ್ಥಳಗಳನ್ನು ಗುರುತಿಸಿ ಅಲ್ಲಿಗೂ ಹೆಚ್ಚಿನ ಬಸ್ಸುಗಳ ವ್ಯವಸ್ಥೆ ಮಾಡಬೇಕಾಗಿ ಈಗ ಪರೀಕ್ಷೆಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ತೊಂದರೆಯನ್ನು ಅನುಭವಿಸುತ್ತಿರುವುದರಿಂದ, ದಯವಿಟ್ಟು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್ಸುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡಬೇಕೆಂದು NSUI ಹಾಸನ ಇವರ ವತಿಯಿಂದ ಒತ್ತಾಯಿಸುತ್ತಿದ್ದೇವೆ ಎಂದರು.

 

NSUI ವತಿಯಿಂದ ಇದೆ 17 ರಂದು ಕರ್ನಾಟಕ ಬಂದ್ ಕರೆ ನೀಡಿದ್ದೇವೆ ಸ್ಕಾಲರ್ ಶಿಪ್, ವಿದ್ಯಾರ್ಥಿಗಳಿಗೆ ಉಚಿತ ಪಾಸ್ ಹಾಗೂ ಶಾಲಾ ಕಾಲೇಜ್ ಗಳಲ್ಲಿ ಶುಲ್ಕ ಹೆಚ್ಚಳ ಕುರಿತು ಕರ್ನಾಟಕ ಬಂದ್ ಗೆ ಕರೆ ನೀಡಿದರು.

ಈ ಸಂಧರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರು ಕಾಂಗ್ರೆಸ್ ಮುಖಂಡ ಸೈಯದ್ ಇದ್ರಿಸ್ ಸೇರಿದಂತೆ ಶಶಾಂಕ್, ದೀಪು, ಪವನ್, ಶರಾವಣ ಎನ್ಎಸ್ಐ ಕಾರ್ಯಕರ್ತರು ಇದ್ದರು.

 

RELATED ARTICLES
- Advertisment -spot_img

Most Popular