Monday, November 25, 2024
Homeಸುದ್ದಿಗಳುಸಕಲೇಶಪುರಯೋಗ ಹಾಗೂ ಧ್ಯಾನದಿಂದ ದುಷ್ಚಟದಿಂದ ದೂರವಿರಲು ಸಾದ್ಯ :ಯೋಗ ಗುರು ಜಗದೀಶ್

ಯೋಗ ಹಾಗೂ ಧ್ಯಾನದಿಂದ ದುಷ್ಚಟದಿಂದ ದೂರವಿರಲು ಸಾದ್ಯ :ಯೋಗ ಗುರು ಜಗದೀಶ್

ಸಕಲೇಶಪುರ. ಪ್ರತಿನಿತ್ಯ ನಿಯಮಿತವಾಗಿ ಯೋಗ ಹಾಗೂ ಧ್ಯಾನ ಮಾಡುವುದರಿಂದ ಮನಸ್ಸು ಏಕಾಗ್ರತೆ ಹೊಂದುವುದರೊಂದಿಗೆ ದುಷ್ಚಟ ದೂರ ಮಾಡಲು ಸಾಧ್ಯ ಎಂದು ಯೋಗ ಚೇತನ ಟ್ರಸ್ಟ ನ ಕಾರ್ಯದರ್ಶಿ ಜಗದೀಶ್ ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ ವತಿಯಿಂದ ಪಟ್ಟಣದ ತೇರಪಂಥ್ ಸಭಾಂಗಣ ದಲ್ಲಿ _1615 ನೇ ಮದ್ಯವರ್ಜನ ಶಿಬಿರದಲ್ಲಿ ಶಿಭಿರಾರ್ಥಿಗಳಿಗೆ ಯೋಗ ಅಭ್ಯಾಸ ನಡೆಸಿ ಮಾತನಾಡಿದ ಅವರು ಯೋಗದಿಂದ ದೈಹಿಕ ಆರೋಗ್ಯ ದೊಂದಿಗೆ ಮಾನಸಿಕ ಆರೋಗ್ಯ ವೃದ್ದಿಯಾಗುವುದು ಇದರಿಂದ ಚಂಚಲ ಮನಸ್ಸಿಗೆ ಕಡಿವಾಣ ಬಿಡುವುದರಿಂದ ದುಷ್ಚಟಗಳಿಗೆ ಬಲಿಯಾಗುವುದು ಕಡಿಮೆಯಾಗಲಿದೆ ಎಂದರು. ವ್ಯಸನ‌ ಮುಕ್ತ ಸಮಾಜ ಈ ಶಿಬಿರದ ಉದ್ದೇಶ ವಾಗಿದ್ದು ಇದರ ಸಂಪೂರ್ಣ ಪ್ರಯೊಜನ ಪಡೆದು ಮಧ್ಯ ಪಾನದಂತಹ ದುಷ್ಚಟದಿಂದ ದೂರವಾಗಿ ನಿಮ್ಮನ್ನು ನಂಬಿರುವ ನಿಮ್ಮ‌ಕುಟುಂಬವನ್ನು ರಕ್ಷಿಸಿ ಸುವ ಜವಬ್ದಾರಿ ನಿಮ್ಮಾದಾದಗಿದೆ ಎಂದರು.ಯೋಗ ಚೇತನ ಟ್ರಸ್ಟ್ ವತಿಯಿಂದ ಶಿಬಿರಾರ್ಥಿಗಳಿಗೆ ಪ್ರತಿ ನಿತ್ಯ ಯೋಗ ಧ್ಯಾನ ಹೇಳಿ ಕೊಡಲಾಗಿತಿದೆ. ಈ ಸಂಧರ್ಭದಲ್ಲಿ ಟ್ರಸ್ಟ ನ ಅಧ್ಯಕ್ಷರಾದ ಲಕ್ಷ್ಮೀ ರಂಗನಾಥ್ ,ಯೋಗೇಶ ಶಿಬಿರಾಧಿಕಾರಿ ಕುಮಾರ್ ಟಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular