ಸಕಲೇಶಪುರ: ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಜಿಲ್ಲೆ 317 ಡಿ ವತಿಯಿಂದ ಕೈಗೊಳ್ಳಲಾಗುತ್ತಿರುವ ಹಿಂದೂ ಮುಕ್ತಿಧಾಮ ನವೀಕರಣ ಕಾರ್ಯಕ್ಕೆ ಗುದ್ದಲಿ ಪೂಜೆಯನ್ನು ಮಂಗಳವಾರ ನೆರವೇರಿಸಲಾಯಿತು. ಈ ಸಂಧರ್ಭದಲ್ಲಿ ಲಯನ್ಸ್ 317 ಡಿ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿ, ಶಾಸಕ ಎಚ್.ಕೆ ಕುಮಾರಸ್ವಾಮಿ,ಲಯನ್ಸ್ ವಲಯ ಅಧ್ಯಕ್ಷ ಡಾ.ನವೀನ್ ಚಂದ್ರ ಶೆಟ್ಟಿ, ಲಯನ್ಸ್ ತಾಲೂಕು ಅಧ್ಯಕ್ಷ ಜಯಶಂಕರ್, ಲಯನ್ಸ್ ಕಾರ್ಯದರ್ಶಿ ವಿಶ್ವನಾಥ್ ,ಪುರಸಭಾ ಅಧ್ಯಕ್ಷ ಕಾಡಪ್ಪ, ಹಿಂದೂ ಮುಕ್ತಿಧಾಮ ಟ್ರಸ್ಟ್ ಅಧ್ಯಕ್ಷ ಜೈ ಮಾರುತಿ ದೇವರಾಜ್, ಪುರಸಭಾ ನಾಮನಿರ್ದೇಶನ ಸದಸ್ಯ ಉಮೇಶ್, ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್, ಮುಂತಾದವರು ಹಾಜರಿದ್ದರು.